ಚಿಕ್ಕೋಡಿ (ಬೆಳಗಾವಿ): ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ವ್ಯಕ್ತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಕರ್ನಾಟಕ ಪಬ್ಲಿಕ್ ಶಾಲೆಯ ಹಿಂಭಾಗದ ಗ್ರಾಮಸ್ಥರು ಕೊರೊನಾ ದೃಢಪಟ್ಟ ಏರಿಯಾದ ರಸ್ತೆಗೆ ಬೇಲಿ ಹಾಕುವ ಮೂಲಕ ಜನರ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾ ಧೃಡಪಟ್ಟ ವ್ಯಕ್ತಿಯ ಸಂಪರ್ಕಿತರ ಮಾಹಿತಿ ಕಲೆ ಹಾಕುತ್ತಿದ್ದು, ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಿದ್ದಾರೆ. ಯರಗಟ್ಟಿ ಗ್ರಾಮದವರಲ್ಲಿ ಕೊರೊನಾ ಆತಂಕ ಶುರುವಾಗಿದ್ದು, ಊರಿನ ಕೆಲ ಯುವಕರು ಜಾಗೃತಿ ಮೂಡಿಸಿದರು.
ಕೊರೊನಾಗೆ ಯಾರು ಹೆದರಬೇಕಾದ ಅವಶ್ಯಕತೆವಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ಕೊರೊನಾ ತಡೆಗೆ ವಿಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಸಿ ಎಂದು ಅರಿವು ಮೂಡಿಸಿದರು.