ETV Bharat / state

ಬೆಳಗಾವಿಯಲ್ಲಿ ಡೆತ್ ರೇಟಿಂಗ್ ಕಡಿಮೆ ಆಗಿದೆ: ಸಿಎಂ ಬಿಎಸ್​ವೈಗೆ ಜಿಲ್ಲಾಧಿಕಾರಿ ಮಾಹಿತಿ - Corona Death Rate Declines in Belgaum

ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ರೇಟ್ ಕಡಿಮೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ಬೆಳಗಾವಿ, ಗೋಕಾಕ್​, ಅಥಣಿಯಲ್ಲಿ ಪ್ರಕರಣ ಇಳಿಕೆಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್​ ಸಿಎಂ ಬಿಎಸ್​ವೈಗೆ ಮಾಹಿತಿ ನೀಡಿದ್ದಾರೆ.

corona meeting between c m Bsy and M G Hiremath
ಸಿಎಂ ಬಿಎಸ್​ವೈಗೆ ಡಿ ಸಿ ಎಂ.ಜಿ.ಹಿರೇಮಠ್​ ಮಾಹಿತಿ.
author img

By

Published : Oct 8, 2020, 7:05 PM IST

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರೇಟ್ 11 ಪರ್ಸೆಂಟ್​ನಿಂದ ಶೇ.4.9ಕ್ಕೆ ಇಳಿದಿದೆ. ಇದಲ್ಲದೆ ಡೆತ್ ರೇಟ್ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಸಿಎಂ ಬಿಎಸ್​ವೈಗೆ ಮಾಹಿತಿ ನೀಡಿದ್ದಾರೆ.

ಸಿಎಂ ಬಿಎಸ್​ವೈಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್​ ಮಾಹಿತಿ

ಕೊರೊನಾ ನಿಯಂತ್ರಣ ಕುರಿತ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗೆ ರ್ಯಾಪಿಡ್ ಟೆಸ್ಟ್ ಜಾಸ್ತಿ ಮಾಡಲಾಗಿದ್ದು, ಈದೀಗ ಆರ್​ಟಿಪಿಸಿಆರ್​ ಟೆಸ್ಟ್ ಹೆಚ್ಚಿಸಲಾಗಿದೆ. ಅ. 6ರಂದು 1800, ಅ.7ರಂದು 1200 ಟೆಸ್ಟ್ ಮಾಡಲಾಗಿದೆ ಎಂದರು.

ಇದಲ್ಲದೆ ಸೇನಾ ತರಬೇತಿ ಕೇಂದ್ರ, ಏರ್‌ಪೋರ್ಸ್ ಟ್ರೈನಿಂಗ್​ ಸೆಂಟರ್‌ನಲ್ಲಿ 800 ಕೇಸ್ ಬಂದಿವೆ. ಆದರೆ, ಕಾಂಟ್ರ್ಯಾಕ್ಟ್ ಟ್ರೇಸಿಂಗ್ ಗೆ ಸೇನಾಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.

ಡೆತ್ ರೇಟ್ ಕಡಿಮೆ ಮಾಡಲು ಕ್ರಮಕೈಗೊಳ್ಳಿ ಎಂದ ಬಿಎಸ್​ವೈ ಗೆ ಪ್ರತಿಯಾಗಿ ಉತ್ತರಿಸಿದ ಡಿಸಿ, ಮಾಸ್ಕ್ ಹಾಕಿಕೊಳ್ಳಲು ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಅರಿವು ಮೂಡಿಸುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ರೇಟ್ ಕಡಿಮೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ಬೆಳಗಾವಿ, ಗೋಕಾಕ್​, ಅಥಣಿಯಲ್ಲಿ ಪ್ರಕರಣ ಇಳಿಕೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.