ETV Bharat / state

ಹೆಲ್ಮೆಟ್ ಧರಿಸಿಲ್ಲವೆಂದು ದಂಡ ಕಟ್ಟುವಂತೆ ಪೊಲೀಸರ ಪಟ್ಟು: ಮಾಂಗಲ್ಯ ಸರ ಮಾರಲು ಮುಂದಾಗಿದ್ದ ಮಹಿಳೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿಹಟ್ಟಿ ಗ್ರಾಮದ ಭಾರತಿ ವಿಭೂತಿ ಎಂಬ ಮಹಿಳೆ ಪೊಲೀಸರ ಅಮಾನವೀಯ ವರ್ತನೆ ಬಗ್ಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾಂಗಲ್ಯ ಸರ ಮಾರಲು ಮುಂದಾದ ಮಹಿಳೆ
ಮಾಂಗಲ್ಯ ಸರ ಮಾರಲು ಮುಂದಾದ ಮಹಿಳೆ
author img

By

Published : Feb 26, 2021, 10:21 PM IST

ಬೆಳಗಾವಿ: ನಗರದ ಟ್ರಾಫಿಕ್ ‌ಪೊಲೀಸರ ಕಿರುಕುಳಕ್ಕೆ ತನ್ನ ಮಾಂಗಲ್ಯವನ್ನೇ ನೀಡಲು ಮಹಿಳೆಯೋರ್ವರು ಮುಂದಾಗಿದ್ದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿಹಟ್ಟಿ ಗ್ರಾಮದ ಭಾರತಿ ವಿಭೂತಿ ಎಂಬ ಮಹಿಳೆ ಪೊಲೀಸರ ಅಮಾನವೀಯ ವರ್ತನೆ ಬಗ್ಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾಂಗಲ್ಯ ಸರ ಮಾರಲು ಮುಂದಾಗಿದ್ದ ಮಹಿಳೆ

ಭಾರತಿ ತಮ್ಮ ಪತಿ ಜತೆಗೆ ಮಾರುಕಟ್ಟೆಗೆಂದು ಬೈಕ್ ಮೇಲೆ ಬೆಳಗಾವಿಗೆ ಬಂದಿದ್ದರು. ಖರೀದಿ ಮುಗಿಸಿ ಮರಳಿ ಬರುವಾಗ ಬಸ್ ನಿಲ್ದಾಣ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲ ಎಂದು ಬೈಕ್ ತಡೆದಿದ್ದಾರೆ. ದಾಖಲೆ ಪತ್ರ ಪರಿಶೀಲಿಸುವ ಮುನ್ನವೇ ಪೊಲೀಸರು ದಂಡದ ರಶೀದಿ ಹರಿದಿದ್ದಾರೆ. ದಂಡ ಪಾವತಿಸುವವರೆಗೆ ಬಿಡಲ್ಲ ಎಂದು ಪೊಲೀಸರು ಪಟ್ಟು ಹಿಡಿದಿದ್ದಾರೆ. ಹೆಲ್ಮೆಟ್ ಧರಿಸಿಲ್ಲ, ದಂಡ ಕಟ್ಟುವಂತೆ ಪೊಲೀಸರು ಹೇಳಿದ್ದಾರೆ. ಸಂತೆ ಮಾಡಿ ಹಣ ಖಾಲಿ ಆಗಿದೆ, ಕೇವಲ ನೂರು ರೂಪಾಯಿ ಇದೆ, ಪಡೆಯಿರಿ. ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದು ದಂಪತಿ ಹೇಳಿದ್ದಾರೆ.

ಓದಿ:ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳಾ ಕಾನ್ಸ್​​​ಟೇಬಲ್ ನೇಣಿಗೆ ಶರಣು

ಫೈನ್ ಕಟ್ಟಿಯೇ ಹೋಗಬೇಕು ಎಂದು ಪೊಲೀಸರು ಪಟ್ಟು ಹಿಡಿದ್ದರಂತೆ. ಪೊಲೀಸರ ವರ್ತನೆಗೆ ಬೇಸತ್ತು ಮಹಿಳೆ ತನ್ನ ಕೊರಳಲ್ಲಿದ್ದ ಮಾಂಗಲ್ಯ ಸರ ತೆಗೆದು ಇದನ್ನು ಮಾರಿ ದಂಡದ ಹಣ ಪಾವತಿಸಿ ಎಂದು ಪತಿ ಕೈಗೆ ಇಟ್ಟಿದ್ದಾಳೆ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸರು ದಂಪತಿಯನ್ನು ಬಿಟ್ಟು ಕಳಿಸಿದ್ದಾರೆ. ಟ್ರಾಫಿಕ್ ಪೊಲೀಸರ ಅಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.