ETV Bharat / state

ಮಹೇಶ್​​​ ಕುಮಟಳ್ಳಿ ರಾಜೀನಾಮೆ ವಿರುದ್ಧ ಕಾರ್ಯಕರ್ತರ ಆಕ್ರೋಶ

ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ರಾಜೀನಾಮೆ ನೀಡಿರುವುದನ್ನು ಕ್ಷೇತ್ರದ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Jul 10, 2019, 6:56 PM IST

ಮಹೇಶ್​ ಕುಮಟಳ್ಳಿ ರಾಜೀನಾಮೆ ವಿರುದ್ಧ ಕಾರ್ಯಕರ್ತರ ಅಸಮಾಧಾನ

ಚಿಕ್ಕೋಡಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಮಹೇಶ್​​ ಕುಮಟಳ್ಳಿ ರಾಜೀನಾಮೆ ನೀಡಬಾರದಿತ್ತು ಎಂಬ ಚರ್ಚೆಗಳು ಈಗ ಅಥಣಿ ಮತ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಮತದಾರರು ಮಹೇಶ್​​​ ಕುಮಟಳ್ಳಿ ಅವ‌‌‌ರಿಗೆ ಹೇಗೆಲ್ಲಾ ಬೆಂಬಲ ನೀಡಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ಚರ್ಚೆ ಮಾಡಿದ್ದಾರೆ. ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಯಲ್ಲಪ್ಪಾ ಕಾಂಬಳೆ ಎಂಬುವವರು ವಿಧಾನಸಭಾ ಚುನಾವಣಾ ವೇಳೆ ಮಹೇಶ್​ ಕುಮಟಳ್ಳಿ ಗೆಲುವಿಗಾಗಿ ಸಾಕಷ್ಟು ಪ್ರಚಾರ ಕೈಗೊಂಡಿದ್ದರು. ಕುಮಟಳ್ಳಿ ಅವರಿಗೆ ಬೆಂಬಲ ಸೂಚಿಸಿ ಸಪ್ತಸಾಗರ ಗ್ರಾಮದ ಪ್ರತಿ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡಿದ್ದರು. ಮಹೇಶ್​ ಕುಮಟಳ್ಳಿ ಆಯ್ಕೆಯಾಗುವಂತೆ ಗ್ರಾಮದ ದೇವತೆಗೆ ಹರಕೆ ಕೂಡಾ ಮಾಡಿ ಗೆದ್ದ ನಂತರ ದೇವಿಗೆ ಧೀರ್ಗ ದಂಡ ನಮಸ್ಕಾರ ಹಾಕಿ ಹರಕೆ ಕೂಡಾ ತೀರಿಸಿದ್ದಾರೆ.

ಮಹೇಶ್​ ಕುಮಟಳ್ಳಿ ರಾಜೀನಾಮೆ ವಿರುದ್ಧ ಕಾರ್ಯಕರ್ತರ ಅಸಮಾಧಾನ

ಆದರೆ ಕುಮಟಳ್ಳಿ ಮಾತ್ರ ಈವರೆಗೂ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡದೆ ಈಗ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Intro:ಕುಮಟಳ್ಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರು
Body:
ಚಿಕ್ಕೋಡಿ :

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಭದ್ರ ಕೋಟೆಯನ್ನು ಭೇದಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಲಕ್ಷ್ಮಣ ಸವದಿ ಅವರನ್ನ ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ ಕುಮಠಳ್ಳಿ ಆಯ್ಕೆಯಾಗಿದ್ದರು.

ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಮಾತು ಕೇಳಿ ಮಹೇಶ ಕುಮಠಳ್ಳಿ ರಾಜೀನಾಮೆ ನೀಡ ಬಾರದಿತ್ತು ಎಂಬ ಚರ್ಚೆಗಳು ಈಗ ಅಥಣಿ ಮತ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ.

ಹೌದು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಮತದಾರರು ಮಹೇಶ ಕುಮಠಳ್ಳಿ ಅವ‌‌‌ರಿಗೆ ಹೇಗೆಲ್ಲಾ ಬೆಂಬಲ ನೀಡಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ಚರ್ಚೆ ಮಾಡಿದ್ದಾರೆ.

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಯಲ್ಲಪ್ಪಾ ಕಾಂಬಳೆ ಎಂಬುವವರು ಬಿಜೆಪಿ ಕಾರ್ಯಕರ್ತರೊಬ್ಬರ ಜಮಿನನ್ನ ಉಳುಮೆ ಮಾಡಿಕೊಂಡಿದ್ದರು. ಆದರೆ, ಯಲ್ಲಪ್ಪಾ ಕಾಂಬಳೆ ಎಂಬ ವ್ಯಕ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ ಕುಮಠಳ್ಳಿ ಪರ ಪ್ರಚಾರ ಮಾಡುತ್ತಿದ್ದನ್ನ ಗಮನಿಸಿ ಈತ ಉಳುಮೆ ಮಾಡುತ್ತಿದ್ದ ಜಮಿನನ್ನು ಹಿಂಪಡೆದಿದ್ದರು. ಆದರೆ, ಇವರು ಮಾತ್ರ ಪಕ್ಷದ ನಿಷ್ಠೆಗೆ ಬದ್ದರಾಗಿದ್ದಾರೆ.

ಇವೆಲ್ಲ ಘಟನೆಗಳಾದರೂ ಸಹಿತ ಯಲ್ಲಪ್ಪಾ ಕಾಂಬಳೆ ಯವರು ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎಂದು ಪ್ರಚಾರ ಮಾಡಿ ಸ್ವಂತ ಕೈಯಲ್ಲಿದ್ದ ಹತ್ತು ಸಾವಿರ ರೂಪಾಯಿ ಪಕ್ಷಕ್ಕೆ ಖರ್ಚು ಮಾಡಿ ಕುಮಟಳ್ಳಿ ಅವರಿಗೆ ಬೆಂಬಲ ಸೂಚಿಸಿ ಸಪ್ತಸಾಗರ ಗ್ರಾಮದ ಪ್ರತಿ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡಿದ್ದಾರೆ.

ಮಹೇಶ ಕುಮಠಳ್ಳಿ ಅವರು ಆಯ್ಕೆಯಾಗುವಂತೆ ಗ್ರಾಮದ ದೇವತೆಗೆ ಹರಕೆ ಕೂಡಾ ಮಾಡಿ ಗೆದ್ದ ನಂತರ ದೇವಿಗೆ ದಂಡ ನಮಸ್ಕಾರ ಹಾಕಿ ಹರಕೆ ಕೂಡಾ ತೀರಿಸಿದ್ದಾರೆ.

ಹಾಗೆ ಇನ್ನೊಬ್ಬ ಕಾಂಗ್ರೆಸ್ ಕಾರ್ಯಕರ್ತ ಪರಶುರಾಮ ಕೊಳೆಕರ ಮಾತನಾಡಿ ಇಂತಹ ವಿಷಯ ಅರಿತು ಶಾಸಕ ಮಹೇಶ ಕುಮಟಳ್ಳಿ ವಾಪಸ್ಸು ಬರಲಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ ಮತ್ತು ಶಾಸಕರು ಆಯ್ಕೆ ಆದ ದಿನದಿಂದ ಬಿಜೆಪಿ ಪರ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ, ಕುಮಟಳ್ಳಿ ಮಾತ್ರ ಇನ್ನೂವರೆಗೂ ಯಾವ ಕೆಲಸಾನು ಮಾಡದೆ ಈಗ ರಾಜೀನಾಮೆ ಕೊಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲ ಚರ್ಚೆಗಳು ತಮ್ಮ ವ್ಯಯಕ್ತಿಕವಾಗಿ ಮಾತನಾಡುವಾಗ ವಿಡಿಯೋ ಮಾಡಲಾಗಿದ್ದು. ಸಾಧಾರಣ ಕಾರ್ಯಕರ್ತರು ಮಹೇಶ ಕುಮಟಳ್ಳಿ ಈ ರೀತಿ ಮಾಡುತ್ತಾರೆ ಎನ್ನುವ ನಿರೀಕ್ಷೆ ಕೂಡಾ ಮಾಡಿರಲಿಲ್ಲ. ಇನ್ನು ಕಾಲ ಮಿಂಚಿಲ್ಲ ಕುಮಟಳ್ಳಿ ರಾಜೀನಾಮೆ ನೀಡದೆ ಮರಳಿ ಅಥಣಿ ಮತಕ್ಷೇತ್ರಕ್ಕೆ ಬಂದು ಜನಪರ ಕೆಲಸ ಮಾಡಲಿ ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದು ಕಾರ್ಯಕರ್ತರ ಮಾತಾಗಿವೆ.

ಅಥಣಿ ಶಾಸಕ ಮಹೇಶ್ ಕುಮಠಳ್ಳಿ ರಾಜಿನಾಮೆ ಕೋಡುವ ಮುಂಚೆ ಮತದಾರರ ಗಮನ ತರಬೇಕಿತ್ತು ಎಂದು ಅಥಣಿ ತಾಲೂಕಿನ ಸಾರ್ವಜನಿಕರು ಎಲ್ಲೇಡೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.