ETV Bharat / state

ಹಣವಿಲ್ಲದೇ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ: ಆರ್ ಅಶೋಕ್​ ವಾಗ್ದಾಳಿ - ಕಾಂಗ್ರೆಸ್ ಸರ್ಕಾರ

R Ashok vocal lash on Congress: ಕಾಂಗ್ರೆಸ್​ ಹಣವನ್ನೆಲ್ಲ ಚುನಾವಣೆಗೂ ಮುಂಚೆ ಘೋಷಿಸಿದ್ದ ಗ್ಯಾರೆಂಟಿಗಳನ್ನು ಪೂರೈಸಲು ಉಪಯೋಗಿಸಿ, ಈಗ ರಸ್ತೆ ಅಭಿವೃದ್ಧಿ, ಆಸ್ಪತ್ರೆ, ಶಾಲೆಗಳ ಹಾಗೂ ರೈತರ ಅಭಿವೃದ್ಧಿಗೆ ಕೊಡಲು ಹಣವಿಲ್ಲದೆ ಪಾಪರ್​ ಆಗಿದೆ ಎಂದು ಆರ್​ ಅಶೋಕ್​ ಕಿಡಿಕಾರಿದ್ದಾರೆ.

Opposition Leader R Ashok
ವಿಪಕ್ಷ ನಾಯಕ ಆರ್​ ಅಶೋಕ್​
author img

By ETV Bharat Karnataka Team

Published : Dec 7, 2023, 1:27 PM IST

Updated : Dec 7, 2023, 3:53 PM IST

ವಿಪಕ್ಷ ನಾಯಕ ಆರ್​ ಅಶೋಕ್​

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಪಾಪರ್ ಆಗಿದೆ. ಜನರ ಮೇಲೆ ವಿಪರೀತ ತೆರಿಗೆ ಹಾಕಿ ಹಣ ವಸೂಲಿ ಮಾಡಲು ಹೊರಟಿರುವ ಇದೊಂದು ಕೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರ ಹಣ ದುರ್ಬಳಕೆ ಆಗಬಾರದು. ದಲಿತರಿಗೆ ಮೀಸಲಿಟ್ಟ ಹಣ ಅವರ ಕೇರಿಗಳ ಅಭಿವೃದ್ಧಿಗೆ ಬಳಸುವುದು ಬಿಟ್ಟು ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದೀರಿ. ರಾಜ್ಯದಲ್ಲಿ ಬರಗಾಲ ಉಂಟಾಗಿರುವ ಸಂದರ್ಭದಲ್ಲಿ ಸರ್ಕಾರ ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹೇರುತ್ತಿದೆ ಎಂದು ಕಿಡಿಕಾರಿದರು.

ಚುನಾವಣೆಗೂ ಮುಂಚೆ ವೋಟ್​ಗಾಗಿ ಗ್ಯಾರೆಂಟಿ ಘೋಷಿಸಿದರು. ಈಗ ಅವುಗಳಿಗೆ ಹಣ ಬಳಸಿ ರಸ್ತೆ ಅಭಿವೃದ್ಧಿ, ಆಸ್ಪತ್ರೆ, ಶಾಲೆಗಳು ಮತ್ತು ರೈತರಿಗೆ ಕೊಡೋಕೆ ಇವರ ಬಳಿ ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡ್ತೀನಿ ಅಂತ ಹೇಳ್ತಾರೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದೆ. ಆದರೂ ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆ ತೆರೆದಿಲ್ಲ. ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ.

ಬರದ ಚರ್ಚೆ ಮುಗಿದ ಬಳಿಕ ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳು ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕೆಂದು ಸ್ಪೀಕರ್ ಅವರ ಬಳಿ ನಾನು ಮನವಿ ಮಾಡಿಕೊಂಡಿದ್ದೇನೆ. ಅವರು ಕೂಡ ಒಪ್ಪಿದ್ದಾರೆ. ಇವತ್ತೂ ಅವರ ಮುಂದೆ ಬೇಡಿಕೆ ಇಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರದ ನಫೇಡ್ ಮೂಲಕ ಎಂಎಸ್‌ಪಿ ಅಡಿ ಕೊಬ್ಬರಿ ಖರೀದಿಸಿದರೆ ರೈತರಿಗೆ ಒಳಿತು: ಸಚಿವ ಶಿವಾನಂದ ಪಾಟೀಲ

Last Updated : Dec 7, 2023, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.