ಅಥಣಿ/ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ಅಥಣಿ ವಿಧಾನಸಭಾ ಕ್ಷೇತ್ರದ ತೇಲಸಂಗ ಹೋಬಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅನಿವಾರ್ಯವಾಗಿ ಚುನಾವಣೆ ಬಂದಿದೆ. ಈ ಚುನಾವಣೆಯಿಂದ ಮಹೇಶ್ ಕುಮಟಳ್ಳಿ ಹಾಗೂ ಶ್ರಿಮಂತ ಪಾಟೀಲ್ಗೆ ಮಾತ್ರ ಲಾಭ ಇನ್ಯಾರಿಗೂ ಲಾಭವಿಲ್ಲ ಎಂದ್ರು. ಹಸಿ ಸುಳ್ಳು ಹೇಳಿ ಅಥಣಿ ಮತದಾರರಿಗೆ ಮೋಸ ಮಾಡಿದ್ದಾರೆ. ನಿಮ್ಮೊಂದಿಗೆ ಏನಾದರೂ ಬಿಜೆಪಿಗೆ ಹೋಗುತ್ತೇನೆ ಎಂದು ಕೇಳಿದ್ರಾ?ನಿಮಗೆ ಮೋಸ ಮಾಡಿ ಅವಮಾನ ಮಾಡಿದ್ದಾರೆ ಎಂದು ಗುಡುಗಿದ್ರು.
ಈಗ ಮತ್ತೆ ಅವರಿಗೆ ಪಾಠ ಕಲಿಸಲು ಅವಕಾಶ ಸಿಕ್ಕಿದೆ. ಅವರಿಗೆ ತಕ್ಕ ಪಾಠ ಕಲಿಸಲು ಮರೆಯಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು. ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಕುಮಟಳ್ಳಿ ವಿಧಾನಸಭಾ ಕಲಾಪಕ್ಕೆ ಬರಲ್ಲ ಅಥಣಿ ಹೇಗೆ ಅಭಿವೃದ್ಧಿ ಆಗುತ್ತೆ.. ಎರಡು ತಿಂಗಳುಗಳ ಕಾಲ ಮುಂಬೈನಲ್ಲಿ ಇದ್ದಾರೆ. ಈ ಅನರ್ಹ ಶಾಸಕರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ರು.
ಕಾಂಗ್ರೆಸ್ ಸರ್ಕಾರ ಹೇಳಿದ್ದನ್ನು ಮಾಡುವ ಸರ್ಕಾರ, ಅನ್ನಭಾಗ್ಯ ಯೋಜನೆಯಂತೆ ಹಲವು ಯೋಜನೆಗಳನ್ನು ನೀಡಿದೆ. ಯಡಿಯೂರಪ್ಪ ಬರೀ ಸುಳ್ಳು ಹೇಳುವ ಮೂಲಕ ನರೇಂದ್ರ ಮೋದಿ ಹೇಸರು ಹೇಳುತ್ತಾರೆ. ಇನ್ನು, ಯಡಿಯೂರಪ್ಪ ಆಪರೇಶನ್ ಕಮಲ ಮಾಡಿದ್ದು ಬಿಟ್ರೆ ಮತ್ತೇನು ಮಾಡಿಲ್ಲ ಎಂದು ಆರೋಪಿಸಿದ್ರು. ಮಿಸ್ಟರ್ ನರೇಂದ್ರ ಮೋದಿ ಗುಜರಾತ್ನಲ್ಲಿ ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೆ ಇಲ್ಲ..? ಎಂದು ಪ್ರಶ್ನಿಸಿದ್ರು.