ETV Bharat / state

ಬೆಳಗಾವಿಗೆ ಆಗಮಿಸುತ್ತಿರುವ ಬಿಎಸ್​ವೈ: ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​

ಸಿಎಂ ಯಡಿಯೂರಪ್ಪ ಇಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದು, ಇತ್ತೀಚೆಗೆ ನಿಧನರಾದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಂಚಾರ ಮಾಡುವ ರಸ್ತೆ ಮಾರ್ಗದಲ್ಲಿ ಹಾಗೂ ಅಂಗಡಿಯವರ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

CM Yediyurappa visit to Belagavi
ಬೆಳಗಾವಿಗೆ ಆಗಮಿಸುತ್ತಿರುವ ಸಿಎಂ ಬಿಎಸ್​ವೈ
author img

By

Published : Oct 7, 2020, 10:05 AM IST

Updated : Oct 7, 2020, 10:30 AM IST

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ದಿವಂಗತ ಸುರೇಶ್ ಅಂಗಡಿಯವರ ಮನೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಂಚಾರ ಮಾಡುವ ರಸ್ತೆ ಮಾರ್ಗಗಳು ಹಾಗೂ ಅಂಗಡಿಯವರ ಮನೆಯ ಹತ್ತಿರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬೆಳಗಾವಿಗೆ ಆಗಮಿಸುತ್ತಿರುವ ಬಿಎಸ್​ವೈ, ಸುರೇಶ್ ಅಂಗಡಿಯವರ ಮನೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್

ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಇದಾದ ನಂತರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಿಎಂ ಭದ್ರತೆಗೆಂದು ಅಂಗಡಿಯವರ ಮನೆಯ ಬಳಿ 200ಕ್ಕೂ ಹೆಚ್ಚು ಪೊಲೀಸ್ ಪೇದೆಗಳು, ಇಬ್ಬರು ಎಸಿಪಿ, 10ಕ್ಕೂ ಹೆಚ್ಚಿನ ಸಿಪಿಐಗಳನ್ನು ನಿಯೋಜಿಸಲಾಗಿದೆ. ಸುರೇಶ್ ಅಂಗಡಿ ಮನೆಯ ಮುಂಬಾಗಿಲಿಗೆ ಸೆಕ್ಯುರಿಟಿ ಚೆಕ್ ಮಷಿನ್ ಹಾಕಿದ್ದು, ಗಣ್ಯರಿಗೆ ಮಾತ್ರ ಮನೆಯ ಒಳಗಡೆ ಪ್ರವೇಶವನ್ನು ನೀಡಲಾಗಿದೆ.

ಈಗಾಗಲೇ ಧಾರವಾಡ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಆಗಮಿಸಿದ್ದು, ಯಡಿಯೂರಪ್ಪನವರನ್ನು ಬರಮಾಡಿಕೊಳ್ಳಲಿದ್ದಾರೆ.

Last Updated : Oct 7, 2020, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.