ETV Bharat / state

ಬೆಳಗಾವಿಗೆ ಸಿಎಂ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ಬಂತು ವೈರಸ್​ ಸ್ಕ್ರೀನಿಂಗ್​ ಮಷಿನ್​ - cm bs yadiyurappa latest news

ಸಿಎಂ ಬಿಎಸ್​ ಯಡಿಯೂರಪ್ಪ ಅವರು ಇಂದು ವಿಧಾನ ಪರಿಷತ್​ ಸದಸ್ಯ ಮಹಾಂತೇಶ ಕವಟಗಿಮಠ ಪುತ್ರಿಯ ವಿವಾಹ ಸಮಾರಂಭದ ಸಲುವಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ಈ ಹಿನ್ನಲೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಷಿನ್ ಅಳವಡಿಸಲಾಗಿದೆ.

CM visits Belgavi
ಬೆಳಗಾವಿಗೆ ಸಿಎಂ ಆಗಮನ...ಎಚ್ಚೆತ್ತ ಆರೋಗ್ಯ ಇಲಾಖೆ ಸಿಬ್ಬಂದಿ
author img

By

Published : Mar 15, 2020, 12:07 PM IST

ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಸಮಾರಂಭದ ಸಲುವಾಗಿ ಸಿಎಂ ಬಿ ಎಸ್​ ಯಡಿಯೂರಪ್ಪ ಇಂದು ಜಿಲ್ಲೆಗೆ ಆಗಮಿಸಿದ್ದಾರೆ.

ಬೆಳಗಾವಿಗೆ ಸಿಎಂ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ವೈರಸ್​ ಸ್ಕ್ರೀನಿಂಗ್​ ಮಷಿನ್​ ತಂದ ಆರೋಗ್ಯ ಇಲಾಖೆ ಸಿಬ್ಬಂದಿ

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ ಸಿಎಂ ಅವರನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸ್ವಾಗತಿಸಿದರು.

ಸಿಎಂ ಆಗಮನ ಹಿನ್ನೆಲೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಷಿನ್ ಅಳವಡಿಸಲಾಗಿದೆ. ಕೊರೊನಾ ವೈರಸ್ ಹಾವಳಿ ಇದ್ದರೂ ಕೂಡಾ ವಿಮಾನ ನಿಲ್ದಾಣದಲ್ಲಿ ಈವರೆಗೆ ಸ್ಕ್ರೀನಿಂಗ್ ಮಷಿನ್ ಅಳವಡಿಸಿರಲಿಲ್ಲ ಎನ್ನಲಾಗ್ತಿದೆ. ಇಂದು ಸಿಎಂ ಆಗಮಿಸುತ್ತಿದ್ದಂತೆ ಇನ್ಫ್ರಾರೆಡ್ ಥರ್ಮೊಮೀಟರ್ ಯಂತ್ರದ ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.

102 ಡಿಗ್ರಿಗಿಂತ ಹೆಚ್ಚು ಜ್ವರ ಇದ್ರೆ ಅಂತಹವರನ್ನು ಐಸೋಲೇಷನ್ ವಾರ್ಡ್​ಗೆ ಕಳಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.