ಬೆಳಗಾವಿ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಲಿಕಾಪ್ಟರ್ಅನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದರು.
ಜಿಲ್ಲೆಯ ಕಿತ್ತೂರಿಗೆ ಆಗಮಿಸಿದ ಸಿಎಂ ಹೆಚ್ಡಿಕೆ ಅವರಿದ್ದ ಹೆಲಿಕಾಪ್ಟರ್ ಪರಿಶೀಲಿಸಲಾಯಿತು. ಕೆನರಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರವಾಗಿ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಆಗಮಿಸಿದ್ದರು.
ಹೆಲಿಕಾಪ್ಟರ್ನಲ್ಲಿ ಸಿಎಂ ಹಾಗೂ ಅವರ ಜತೆಗಿದ್ದ ಬ್ಯಾಗ್ಗಳನ್ನುತಪಾಸಣೆ ನಡೆಸಲಾಯಿತು. ತಪಾಸಣೆ ವೇಳೆ ಏನೂ ದೊರೆಯದ ಕಾರಣ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ಸಾದರು.