ಬೆಳಗಾವಿ: ಮುಖ್ಯಮಂತ್ರಿಗಳು ಕರೆದಿದ್ದಕ್ಕೆ ಬೆಳಗಾವಿಗೆ ಬಂದಿದ್ದೇನೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೇಳಿದರು.
ಮಾಧ್ಯಮದ ಜೊತೆ ಮಾತನಾಡಿ ಮುಖ್ಯಮಂತ್ರಿಗಳು ಬೆಳಗಾವಿಗೆ ಬನ್ನಿ ಇವತ್ತೇ ಭೇಟಿ ಮಾಡಿ ಎಂದು ಹೇಳಿದ್ದಾರೆ. ಅವರನ್ನು ಇಂದೇ ಭೇಟಿ ಮಾಡುತ್ತೇನೆ, ಯಾವುದೇ ಹೆಚ್ಚಿನ ಮಾಹಿತಿ ಗೊತ್ತಿಲ್ಲ, ಅವರ ಜೊತೆ ಮಾತನಾಡಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಕುರುಬ ಜಾತಿಗೆ ಮೀಸಲಾತಿ ವಿಚಾರಕ್ಕೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಮಾತನಾಡಿ, ಈ ವಿಚಾರದಲ್ಲಿ ಜಾತಿ ಮಧ್ಯ ತರಬೇಡಿ ಎಂದು ಗರಂ ಆದರು.
ಸಚಿವ ಸಂಪುಟಕ್ಕೆ ಇನ್ನೂ ಸೇರಿಲ್ಲ, ಜನರಿಗೆ ಉತ್ತರ ಕೊಡಲಾಗದ ಪರಿಸ್ಥಿತಿಯಲ್ಲಿದ್ದೇನೆ, ನನಗೆ ಇದರ ಬಗ್ಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ. ಸಿಎಂ ಬರಲು ಹೇಳಿದ್ದಾರೆ, ಅವರು ಏನು ಮಾತನಾಡುತ್ತಾರೆ ನೋಡೋಣ ಎಂದರು.
ಹೈಕಮಾಂಡ್ ಸಕಾರಾತ್ಮಕವಾಗಿದೆ: ಸಚಿವ ಸಂಪುಟದಲ್ಲಿ ನನ್ನನ್ನು ಸೇರಿಸಿಕೊಳ್ಳಲು ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿರುವ ವಿಚಾರ ಮೂಲಗಳಿಂದ ಸಿಕ್ಕಿದೆ. ಮುಖ್ಯಮಂತ್ರಿಗಳು ಮಾತಾನಾಡಿದ ಪ್ರಕಾರ ಕೇಂದ್ರ ಪಾಸಿಟಿವ್ ಆಗಿದೆ, ನನಗೆ ರಮೇಶ್ ಜಾರಕಿಹೋಳಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಭರವಸೆ ಸಿಕ್ಕಿದೆ: ಕೆ ಎಸ್ ಈಶ್ವರಪ್ಪ