ETV Bharat / state

ಇಂದು ಅಥಣಿ, ಕಾಗವಾಡದಲ್ಲಿ ಸಿಎಂ ಬಿಎಸ್​ವೈ ಪ್ರಚಾರ... ಸಮಾವೇಶಕ್ಕೆ ವೇದಿಕೆ ಸಜ್ಜು - latest chikkodi belgavi news

ಉಪ ಚುನಾವಣೆ ಹಿನ್ನೆಲೆ ಕಾಗವಾಡ, ಅಥಣಿ ಮತಕ್ಷೇತ್ರದಲ್ಲಿಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಅಥಣಿಯಿಂದ ಮಹೇಶ್​ ಕುಮಠಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್ ಪರ ಸಿಎಂ ಪ್ರಚಾರ ಮಾಡಲಿದ್ದಾರೆ.

ಇಂದು ಅಥಣಿ, ಕಾಗವಾಡ ಉಪಚುನಾವಣೆ ಪ್ರಚಾರಕ್ಕೆ ಸಿಎಂ ಬಿಎಸ್​ವೈ
author img

By

Published : Nov 23, 2019, 10:33 AM IST

ಚಿಕ್ಕೋಡಿ: ಉಪ ಚುನಾವಣೆ ಹಿನ್ನೆಲೆ ಕಾಗವಾಡ, ಅಥಣಿ ಮತಕ್ಷೇತ್ರದಲ್ಲಿಂದು ಬಿಜೆಪಿ ರಣಕಹಳೆ ಮೊಳಗಿಸಲಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿಂದು ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ.

ಇಂದು ಅಥಣಿ, ಕಾಗವಾಡ ಉಪ ಚುನಾವಣೆ ಪ್ರಚಾರಕ್ಕೆ ಸಿಎಂ ಬಿಎಸ್​ವೈ

ಬಿಜೆಪಿ ಸಮಾವೇಶ ಇಂದು ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಹಾಗೆಯೇ ಮಧ್ಯಾಹ್ನ ಕಾಗವಾಡ ಮತಕ್ಷೇತ್ರ ಶಿರಗುಪ್ಪಿಯಲ್ಲಿ ನಡೆಯಲ್ಲಿದ್ದು, ಎರಡೂ ಸಮಾವೇಶಗಳಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಅಥಣಿಯಿಂದ ಮಹೇಶ್​ ಕುಮಟಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ಬಿ.ಎಸ್.ಯಡಿಯೂರಪ್ಪ, ಬೆಳಿಗ್ಗೆ 10:50ಕ್ಕೆ ಅಥಣಿಗೆ ಹಾಗೂ ಮಧ್ಯಾಹ್ನ 2ಕ್ಕೆ ಕಾಗವಾಡ‌ ಮತಕ್ಷೇತ್ರದ ಸಮಾವೇಶ ಮುಗಿಸಿ ನಂತರ ಗೋಕಾಕ್​​ ತೆರಳಲಿದ್ದಾರೆ.

ಸಮಾವೇಶದಲ್ಲಿ ಡಿಸಿಎಂ ಲಕ್ಷ್ಮಣ್​ ಸವದಿ, ಡಿಸಿಎಂ ಗೋವಿಂದ ಕಾರಜೋಳ, ಸಚಿರಾದ ಈಶ್ವರಪ್ಪ, ಸಿ.ಸಿ.ಪಾಟೀಲ್‌ ಸೇರಿದಂತೆ ಬಿಜೆಪಿ ಹಲವು ನಾಯಕರು ಸಿಎಂಗೆ ಸಾಥ್​ ನೀಡಲಿದ್ದಾರೆ. ಸುಮಾರು 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಎಲ್ಲೆಡೆ ಬಿಗಿ ಪೊಲೀಸ್​ ಭದ್ರತೆ ಕೈಗೊಳ್ಳಲಾಗಿದೆ.

Intro:ಇಂದು ಅಥಣಿ, ಕಾಗವಾಡ ಉಪಚುನಾವಣೆ ಪ್ರಚಾರಕ್ಕೆ ಸಿಎಂ ಯಡಿಯೂರಪ್ಪBody:

ಚಿಕ್ಕೋಡಿ :

ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನಲೆ‌ ಕಾಗವಾಡ, ಅಥಣಿ ಮತಕ್ಷೇತ್ರದಲ್ಲಿಂದು ಬಿಜೆಪಿಯ ರಣಕಹಳೆ ಮೊಳಗಿಸಲಿದ್ದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಸಿದ್ದವಾದ ವೇದಿಕೆ.

ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದಲ್ಲಿ ‌ನಡೆಯಲಿರುವ ಬಿಜೆಪಿ ಸಮಾವೇಶ ಬೆಳಿಗ್ಗೆ ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮಧ್ಯಾಹ್ನ ಕಾಗವಾಡ ಮತಕ್ಷೇತ್ರದಲ್ಲಿ ಶಿರಗುಪ್ಪಿಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶ, ಎರಡೂ ಸಮಾವೇಶಗಳಲ್ಲಿ ನಾಡ ದೊರೆ ಯಡಿಯೂರಪ್ಪ ಭಾಗಿ.

ಅಥಣಿಯಿಂದ ಮಹೇಶ ಕುಮಠಳ್ಳಿ ಕಾಗವಾಡದಿಂದ ಶ್ರೀಮಂತ ಪಾಟೀಲ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳದಿದ್ದು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ಬಿ ಎಸ್ ಯಡಿಯೂರಪ್ಪ ಬೆಳಿಗ್ಹೆ ೧೦.೫೦ಕ್ಕೆ ಅಥಣಿಗೆ ಬಂದು ಅಥಣಿ ಹಾಗೂ ಮಧ್ಯಾಹ್ನ ೨.೦೦ ಕ್ಕೆ ಕಾಗವಾಡ‌ ಮತಕ್ಷೇತ್ರದ ಸಮಾವೇಶಗಳನ್ನು ಮುಗಿಸಿ ಗೋಕಾಕ ತೆರಳಲಿರುವ ಬಿ.ಎಸ್.ವೈ

ಸಮಾವೇಶದಲ್ಲಿ ಸಿಎಂಗೆ ಸಾಥ ನೀಡಲಿರುವ ಡಿಸಿಎಂ ಸವದಿ, ಡಿಸಿಎಂ ಕಾರಜೋಳ, ಸಚಿರಾದ ಈಶ್ವರಪ್ಪ, ಸಿಸಿ ಪಾಟೀಲ್‌ ಸೇರಿದಂತೆ ಅನೇಕ ಬಿಜೆಪಿ ನಾಯಕರು. ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ೩೦ ಸಾವಿಕ್ಕೂ ಅಧಿಕ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, ಎಲ್ಲೆಡೆ ಬಿಗಿ ಪೋಲಿಸ್ ಭದ್ರತೆ ನೀಡಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.