ETV Bharat / state

ಸಭಾಪತಿಗಳು ರೂಲಿಂಗ್ ಕೊಟ್ಟ ಮೇಲೆ ನಾನು ಏನೂ ಮಾತನಾಡಲ್ಲ: ಸಿಎಂ ಬೊಮ್ಮಾಯಿ - ಅಧಿವೇಶನದಿಂದ ಕಾಂಗ್ರೆಸ್ ಶಾಸಕರು ಅಮಾನತುಗೊಳಿಸಿದ ವಿಚಾರ

ಸದನದೊಳಗೆ ಏನ್ ನಡೆದಿದೆ ಅದನ್ನು ನಾವು ಹೊರಗಡೆ ಮಾತನಾಡಬಾರದು. ಸದನದಲ್ಲೇ ಸಭಾಪತಿ ರೂಲಿಂಗ್ ಕೊಟ್ಟಿದ್ದಾರೆ. ರೂಲಿಂಗ್ ಕೊಟ್ಟ ಮೇಲೆ ನಾನು ಏನೂ ಮಾತನಾಡಲ್ಲ..

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ
author img

By

Published : Dec 15, 2021, 7:07 PM IST

Updated : Dec 15, 2021, 7:44 PM IST

ಬೆಳಗಾವಿ : ವಿಧಾನ ಪರಿಷತ್ತಿನಲ್ಲಿ ಸಭಾಪತಿಗಳು ರೂಲಿಂಗ್ ಕೊಟ್ಟ ಮೇಲೆ ನಾನು ಏನೂ ಮಾತನಾಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಅಮಾನತು ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು..

ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಕಲಾಪದಲ್ಲಿ 14 ಕಾಂಗ್ರೆಸ್ ಸದಸ್ಯರ ಅಮಾನತು ಮಾಡಲಾಗಿದೆ. ಸದನದೊಳಗೆ ಏನ್ ನಡೆದಿದೆ ಅದನ್ನು ನಾವು ಹೊರಗಡೆ ಮಾತನಾಡಬಾರದು. ಸದನದಲ್ಲೇ ಸಭಾಪತಿ ರೂಲಿಂಗ್ ಕೊಟ್ಟಿದ್ದಾರೆ. ರೂಲಿಂಗ್ ಕೊಟ್ಟ ಮೇಲೆ ನಾನು ಏನು ಮಾತನಾಡಲ್ಲ ಎಂದರು.

ತಮಿಳುನಾಡಿನ ಕುನೂರು ಬಳಿ ಸಂಭಿಸಿದ ದುರಂತದಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ. ಇದರಿಂದ ಭಾರತೀಯ ಸೇನೆ ದುಃಖದಲ್ಲಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಬಳಿಕ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ದೇಶಕ್ಕೆ ಮಾದರಿಯಾದ ಪರಿಷತ್ ನಮ್ಮದು. ನಮ್ಮ ನಿಯಮಾವಳಿಗಳ ಪ್ರಕಾರ ಸದಸ್ಯರು ಎತ್ತಿರುವ ವಿಚಾರ ಚರ್ಚೆಗೆ ಅವಕಾಶ ಇಲ್ಲ. ಸಭಾಪತಿಗಳು ಚರ್ಚೆಗೆ ಅವಕಾಶ ಮಾಡಿ ಕೊಟ್ಟರು. ಚರ್ಚೆ ನಡೆದ ನಂತರವೂ ಬಾವಿಗೆ ಇಳಿದು ಪ್ರತಿಭಟನೆ ಮಾಡಿದರು.

ಸದನದ ಗೌರವಕ್ಕೆ ಚ್ಯುತಿ ತರುವಂತೆ ನಡೆದುಕೊಂಡಿದ್ದಾರೆ. ಹೀಗಾಗಿ, ಸಭಾಪತಿಗಳು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದಾರೆ. ಸಭಾಪತಿ ನಿರ್ಧಾರ ಸರಿಯಾಗಿದೆ. ಅವರು ಯಾರಿಗೂ ಕಿಂಚಿತ್ತು ಬೆಲೆ ಕೊಡದೆ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಧಾನಪರಿಷತ್ತಿನಲ್ಲಿ ಸಭಾಪತಿ ಆದೇಶ ಉಲ್ಲಂಘಿಸಿ ಪ್ರತಿಭಟನೆ..ದಿನದ ಮಟ್ಟಿಗೆ 14 ಕಾಂಗ್ರೆಸ್​ ಸದಸ್ಯರ ಅಮಾನತು

Last Updated : Dec 15, 2021, 7:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.