ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದರಿಂದ ಹೊರಬರಲು ಇದೀಗ ನಾಟಿ ವೈದ್ಯರ ಮೊರೆ ಹೋಗಿದ್ದಾರೆ. ಮೈಸೂರು ಮೂಲದ ನಾಟಿವೈದ್ಯ ಲೋಕೇಶ್ ಟೇಕಲ್ ಎಂಬುವರು ಸಿಎಂಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಿಕಿತ್ಸೆ ನೀಡಿದ್ದಾರೆ.
ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿನ ವಿಟಿಯುದ ಗೆಸ್ಟ್ ಹೌಸ್ ನಲ್ಲಿದ್ದರು. ಆಗ ನಾಟಿ ವೈದ್ಯ ಲೋಕೇಶ್ ಟೇಕಲ್ ಸಿಎಂಗೆ 10 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡುತ್ತಿದ್ದ ವಿಡಿಯೋ ಹಾಗೂ ಫೋಟೋಗಳು 'ಈಟಿವಿ ಭಾರತ'ಕ್ಕೆ ಲಭ್ಯವಾಗಿವೆ. ಇನ್ನೂ ಒಂದು ತಿಂಗಳ ಕಾಲ ಸಿಎಂ ಇರುವ ಕಡೆಗೆ ಹೋಗಿ ಲೋಕೇಶ್ ಚಿಕಿತ್ಸೆ ನೀಡಲಿದ್ದಾರೆ.
ಈ ಹಿಂದೆ ಚರ್ಮರೋಗದಿಂದ ಬಳಲುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೂ ನಾಟಿವೈದ್ಯ ಲೋಕೇಶ್ ಚಿಕಿತ್ಸೆ ನೀಡಿದ್ದರು. ಲೋಕೇಶ್ ಅವರ ಚಿಕಿತ್ಸೆಯಿಂದಲೇ ಲಕ್ಷ್ಮಣ ಸವದಿ ಗುಣಮುಖರಾಗಿದ್ದರು. ಅಧಿವೇಶನದ ವೇಳೆ ನಾಟಿ ವೈದ್ಯರನ್ನು ಸಿಎಂ ಬೊಮ್ಮಾಯಿಗೆ ಲಕ್ಷ್ಮಣ ಸವದಿ ಪರಿಚಯಿಸಿದ್ದರು. ವನಸ್ಪತಿ ಔಷಧಿಯ ಮೂಲಕ ನಾಟಿ ವೈದ್ಯ ಲೋಕೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ನಾವು ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ಬಿಲ್ ಹಿಂಪಡೆದು ಎಸೆಯುತ್ತೇವೆ : ಸಿದ್ದರಾಮಯ್ಯ