ETV Bharat / state

ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: ನದಿಗಳ ಒಳಹರಿವಿನಲ್ಲಿ ಇಳಿಕೆ - Dudhganga

ಕೃಷ್ಣಾ ನದಿಗೆ 97,000ಕ್ಕೂ ಅಧಿಕ ಕ್ಯೂಸೆಕ್‌ ಒಳಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಶುಭಾಸ ಸಂಪಗಾಂವಿ ಮಾಹಿತಿ ನೀಡಿದ್ದಾರೆ.

dasd
ಕೃಷ್ಣಾ ನದಿ ಒಳ ಹರಿವು ಹೆಚ್ಚಳ
author img

By

Published : Aug 26, 2020, 12:01 PM IST

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು ಇಳಿಮುಖವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 84,500 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 13,200 ಕ್ಯೂಸೆಕ್ ನೀರು ಹೀಗೆ ಒಟ್ಟು 97,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 8 ಮಿ.ಮೀ., ನವಜಾ - 11 ಮಿ.ಮೀ., ಮಹಾಬಲೇಶ್ವರ - 7 ಮಿ.ಮೀ., ವಾರಣಾ - 00 ಮಿ.ಮೀ., ಕಾಳಮ್ಮವಾಡಿ - 2 ಮಿ.ಮೀ., ರಾಧಾನಗರಿ - 4 ಮಿ.ಮೀ., ಪಾಟಗಾಂವ - 8 ಮಿ.ಮೀ. ಮಳೆಯಾಗಿರುವುದು ವರದಿಯಾಗಿದೆ.

ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ 92%, ವಾರಣಾ ಜಲಾಶಯ 95%, ರಾಧಾನಗರಿ ಜಲಾಶಯ 98%, ಕಣೇರ ಜಲಾಶಯ 92%, ಧೂಮ ಜಲಾಶಯ 96%, ಪಾಟಗಾಂವ 100%, ಧೂದಗಂಗಾ 98% ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,18,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.