ಚಿಕ್ಕೋಡಿ: ಮನೆಗೆ ಹಾಕಿದ್ದ ಬೀಗ ಮುರಿದು ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಳ್ಳನನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಉಚಗಾಂವ ಗ್ರಾಮದ ರಾಜು ಸುಭಾಷ ದೇಸಾಯಿ (31) ಎಂದು ಗುರುತಿಸಲಾಗಿದೆ. ಆರೋಪಿಯಿಂದ 17,74,900 ಮೌಲ್ಯದ ಬಂಗಾರ ಹಾಗೂ ಎರಡು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸದಲಗಾ, ಬಸವನಾಳಗಡ್ಡೆ, ನನದಿವಾಡಿ, ಕೇರೂರ, ರೂಪಿನಾಳ, ಬೋರಗಾಂವವಾಡಿ ಗ್ರಾಮ ಸೇರಿದಂತೆ 9 ಸ್ಥಳಗಳಲ್ಲಿ ಮನೆಗಳ ಬೀಗ ಮುರಿದು ಬಂಗಾರ ಹಾಗೂ ಹಣ ದೋಚಿದ್ದ ಎನ್ನಲಾಗಿದೆ.