ETV Bharat / state

ಅನೈತಿಕ ಸಂಬಂಧ ಶಂಕಿಸಿ ಜೋಡಿ ಕೊಲೆ: ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ ಚಿಕ್ಕೋಡಿ ಕೋರ್ಟ್​ - ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆ.ಕೆ.ಮಮದಾಪೂರ ಗ್ರಾಮದ ಬಸವರಾಜ ಬುರ್ಜಿ (24) ಹಾಗೂ 21 ವರ್ಷದ ಮಹಿಳೆಯ ಬರ್ಬರ ಹತ್ಯೆಯಾಗಿತ್ತು.

ಅನೈತಿಕ ಸಂಬಂಧ ಹಿನ್ನೆಲೆ ಜೋಡಿ ಕೊಲೆ ಮಾಡಿದ್ದ ಆರೋಪಿಗಳಿಗೆ ಶಿಕ್ಷೆ ಪ್ರಕಟ

author img

By

Published : Jun 15, 2022, 8:30 PM IST

ಚಿಕ್ಕೋಡಿ: ತಾಲೂಕಿನ ಕೆ.ಕೆ.ಮಮದಾಪೂರ ಗ್ರಾಮದಲ್ಲಿ ಅನೈತಿಕ ಸಂಬಂಧದ ಆರೋಪದಡಿ ಜೋಡಿ ಕೊಲೆ ಮಾಡಿದ ಮೂವರು ಆರೋಪಿಗಳಿಗೆ 9 ವರ್ಷಗಳ ಬಳಿಕ ಚಿಕ್ಕೋಡಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಕೆ.ಕೆ.ಮಮದಾಪೂರ ಗ್ರಾಮದ ಬಸವರಾಜ ಬುರ್ಜಿ (24) ಹಾಗೂ 21 ವರ್ಷದ ಮಹಿಳೆಯ ಬರ್ಬರ ಹತ್ಯೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಪೊಲೀಸರು ಬಾಬು ಅಕಳೆ (24) ನಾಗಪ್ಪ ಅಕಳೆ (21) ಹಾಗೂ ಮುತ್ಯಪ್ಪ ಬೀಮಪ್ಪ ಅಕಳೆ (20) ಎಂಬ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಮೂಲಕ ಕೊಲೆ ಆರೋಪ ಸಾಬೀತಾಗಿದ್ದು ಇಂದು ಚಿಕ್ಕೋಡಿಯ ಏಳನೇ ಹೆಚ್ಚುವರಿ ನ್ಯಾಯಾಲಯ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಕೆ.ಕೆ.ಮಮದಾಪೂರ ಗ್ರಾಮದ ಮಹಿಳೆಗೂ ಮತ್ತು ಬಸವರಾಜನಿಗೂ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಹಲವು ಸಾರಿ ಬಸವರಾಜನಿಗೆ ಮಹಿಳೆಯ ಕಡೆಯವರು ಎಚ್ಚರಿಕೆ ನೀಡಿದ್ದರಂತೆ. ಆದರೂ ಸಂಬಂಧ ಮುಂದುವರೆಸಿದ್ದರಿಂದ‌ ಕೊಲೆಗೆ ಹೊಂಚು ಹಾಕಿ ಮಹಿಳೆ ಕುಟುಂಬಸ್ಥರಾದ‌ ಬಾಬು ಅಕಳೆ (24) ನಾಗಪ್ಪ ಅಕಳೆ (21) ಹಾಗೂ ಮುತ್ಯಪ್ಪ ಬೀಮಪ್ಪ ಅಕಳೆ (20) ಜೊತೆಗೂಡಿ 2013ರಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ: ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವ : ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸೇರಿ ಆರು ಜನರಿಗೆ ಗೌರವ ಡಾಕ್ಟರೇಟ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.