ETV Bharat / state

ಚಿಕ್ಕೋಡಿ ಭಾಗದಲ್ಲಿ ತಗ್ಗಿದ ಪ್ರವಾಹ: ಸೇತುವೆಗಳು ಸಂಚಾರಕ್ಕೆ ಮುಕ್ತ

ಪ್ರವಾಹದಿಂದಾಗಿ ಮುಳುಗಡೆಯಾಗಿದ್ದ ಕಲ್ಲೋಳ - ಯಡೂರು ಮತ್ತು ಮಲಿಕವಾಡ - ದತ್ತವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಸುತ್ತಿ ಬಳಸಿ ಸಂಚಾರ ಮಾಡಬೇಕಿದ್ದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

author img

By

Published : Oct 29, 2019, 10:37 PM IST

ಚಿಕ್ಕೋಡಿ ಭಾಗದಲ್ಲಿ ತಗ್ಗಿದ ಪ್ರವಾಹ

ಚಿಕ್ಕೋಡಿ: ಕೃಷ್ಣಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಕೃಷ್ಣಾ ನದಿಯ ಕಲ್ಲೋಳ - ಯಡೂರು ಮತ್ತು ಮಲಿಕವಾಡ - ದತ್ತವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಕೃಷ್ಣಾ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ಕಲ್ಲೋಳ - ಯಡೂರು ಸೇತುವೆ ಸಂಚಾರ ಮುಕ್ತವಾಗಿದ್ದು, ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಯಕ್ಸಂಬಾ, ಸದಲಗಾ, ಬೇಡಕಿಹಾಳ, ಕಲ್ಲೋಳ ಮುಂತಾದ ಗ್ರಾಮಗಳಿಗೆ ಅನುಕೂಲವಾಗಿದೆ.

ಚಿಕ್ಕೋಡಿ ಭಾಗದಲ್ಲಿ ತಗ್ಗಿದ ಪ್ರವಾಹ

ದೂಧಗಂಗಾ ನದಿಯಿಂದ ಮುಳುಗಡೆಯಾಗಿದ್ದ ಮಲಿಕವಾಡ - ದತ್ತವಾಡ ಸೇತುವೆ ಕೂಡಾ ಸಂಚಾರಕ್ಕೆ ಮುಕ್ತವಾಗಿದ್ದು, ಮಲಿಕವಾಡ, ನಣದಿ ಒಡಗೋಲ, ಬೈನಾಕವಾಡಿ, ಯಾದ‌ನವಾಡಿ ಮುಂತಾದ ಗ್ರಾಮಸ್ಥರಿಗೆ ಹಾಗೂ ಮಹಾರಾಷ್ಟ್ರದ ಕುರುಂದವಾಡ, ಶಿರೋಳ, ಜೈಸಿಂಗಪುರ, ಮೀರಜ್ ಮತ್ತು ಸಾಂಗ್ಲಿ ಸೇರಿದಂತೆ ಮಹಾರಾಷ್ಟ್ರಕ್ಕೆ ಒಳಪಡುವ ಗ್ರಾಮಗಳಿಗೆ ಸಂಚರಿಸಲು ಅನುಕೂಲವಾಗಿದೆ.

ಪ್ರವಾಹದಿಂದ ಇಲ್ಲಿಯತನಕ ಕಲ್ಲೋಳ - ಯಡೂರ ಸೇತುವೆ ನಾಲ್ಕು ಬಾರಿ ಮುಳುಗಿದ್ದರಿಂದ ಈ ಭಾಗದ ಸಾರ್ವಜನಿಕರಿಗೆ ಸುತ್ತಿ ಬಳಸಿ ಪ್ರಯಾಣ ಮಾಡುವುದು ಅನಿವಾರ್ಯವಾಗಿತ್ತು. ಸದ್ಯ ನದಿಯ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ನದಿ ತೀರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

Intro:ಕಲ್ಲೋಳ - ಯಡೂರ ಸೇತುವೆ ಸಂಚಾರಕ್ಕೆ ಮುಕ್ತ
Body:
ಚಿಕ್ಕೋಡಿ :

ಕೃಷ್ಣಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟ ಕಡಿಮೆಯಾಗಿದ್ದು ಕೃಷ್ಣಾ ನದಿಯ ಕಲ್ಲೋಳ - ಯಡೂರು ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ದೂಧಗಂಗಾ ನದಿಯ ಮಲಿಕವಾಡ - ದತ್ತವಾಡ ಸೇತುವೆ ಕೂಡಾ ಸಂಚಾರಕ್ಕೆ ಮುಕ್ತವಾಗಿದೆ. ಕೃಷ್ಣಾ ನದಿಯ ಕಲ್ಲೋಳ - ಯಡೂರು ಸೇತುವೆದಿಂದ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಯಕ್ಸಂಬಾ, ಸದಲಗಾ, ಬೇಡಕಿಹಾಳ, ಕಲ್ಲೋಳ ಮುಂತಾದ ಗ್ರಾಮಗಳಿಗೆ ಅನುಕೂಲವಾದರೆ, ಮಲಿಕವಾಡ - ದತ್ತವಾಡ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಮಲಿಕವಾಡ, ನಣದಿ ಒಡಗೋಲ, ಬೈನಾಕವಾಡಿ, ಯಾದ‌ನವಾಡಿ ಮುಂತಾದ ಗ್ರಾಮಸ್ಥರಿಗೆ ಹಾಗೂ ಮಹಾರಾಷ್ಟ್ರದ ಕುರುಂದವಾಡ, ಶಿರೋಳ, ಜೈಸಿಂಗಪುರ, ಮೀರಜ್ ಮತ್ತು ಸಾಂಗ್ಲಿ ಮುಂತಾದ ಮಹಾ ಜಿಲ್ಲೆಯ ತಾಲೂಕು ಗ್ರಾಮಗಳಿಗೆ ಸಂಚರಿಸಲು ಅನುಕೂಲವಾಗಿದೆ

ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಬಂದ ಪ್ರವಾಹದಿಂದಾಗಿ ಇಲ್ಲಿಯ ತನಕ ಕಲ್ಲೋಳ - ಯಡೂರ ಸೇತುವೆ ನಾಲ್ಕು ಬಾರಿ ಮುಳಗಿದ್ದರಿಂದ ಈ ಭಾಗದ ಸಾರ್ವಜನಿಕರಿಗೆ ಸುತ್ತಿ ಬಳಸಿ ಪ್ರಯಾಣಿಸುತ್ತಿರುವುದರಿಂದ ತುಂಬಾ ತೊಂದರೆಗೆ ಒಳಗಾಗಿದ್ದರು. ಈಗ ನದಿಯ ಒಳ ಹರಿವಿನ ಪ್ರಮಾಣದಲ್ಲಿ ಕಡಿಮೆಗಿದ್ದು ಈಗ ನದಿ ತೀರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.