ಬೆಳಗಾವಿ: ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಸಿಎಂ ಯಡಿಯೂರಪ್ಪ ಇಂದು ಬೆಳಗಾವಿಯಲ್ಲಿ ಸಂತ್ರಸ್ತರ ಮನೆಯೊಂದಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಬೆಳಗಾವಿಯ ಮಾಧ್ವಾ ರಸ್ತೆಯಲ್ಲಿ ನೂತನ ಮನೆ ನಿರ್ಮಾಣಕ್ಕೆ ಸಿಎಂ ಗುದ್ದಲಿ ಪೂಜೆ ನೆರವೇರಿಸಿದರು. ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೆರೆ ಸಂತ್ರಸ್ತರಿಗೆ ಒಂದು ಲಕ್ಷ ಹಣ ನೀಡಿದೆ. ನಿನ್ನೆಯಷ್ಟೇ ನಿರಾಶ್ರಿತರ ಖಾತೆಗಳಿಗೆ ಜಿಲ್ಲಾಡಳಿತ ಒಂದು ಲಕ್ಷ ಪರಿಹಾರ ಹಾಕಿತ್ತು. ನಿರಾಶ್ರಿತರು ಮನೆ ಕಟ್ಟಿಕೊಳ್ಳಲು ಅಧಿಕೃತವಾಗಿ ಸಿಎಂ ಇಂದು ಚಾಲನೆ ನೀಡಿದರು.
ಅಥಣಿಗೆ ಸಿಎಂ ಭೇಟಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನೆರೆ ಸಂತ್ರಸ್ತ ಸ್ಥಳಗಳಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ನೆರೆ ಸಂತ್ರಸ್ತರ ಪರಿಹಾರ, ಕುಂದು ಕೊರತೆಗಳನ್ನ ಆಲಿಸಲು ಸಿಎಂ ಯಡಿಯೂರಪ್ಪ ಅಥಣಿ ತಾಲೂಕಿನ ದರೂರ ಗ್ರಾಮಕ್ಕೆ ಭೇಟಿ ನೀಡಲಿದ್ದು, ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಬೇಬ ಜೊಲ್ಲೆ ಸಾಥ್ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಅಥಣಿ ಡಿವೈಎಸ್ಪಿ ಎಸ್. ವಿ. ಗಿರೀಶ್ ನೇತೃತ್ವದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.