ETV Bharat / state

ಕಷ್ಟ ಪಟ್ಟು ಓದಿದ್ದು, ಬರೆದಿದ್ದು ಎಲ್ಲ ನೀರಲ್ಲಿ ನೆಂದೊಯ್ತು... ನೆರೆ ಸಂತ್ರಸ್ತ ವಿದ್ಯಾರ್ಥಿ ಅಳಲು

ಉತ್ತರ ಕರ್ನಾಟಕದ ನೆರೆ ಅಲ್ಲಿನ ರೈತರು, ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೂ ಸಮಕಷ್ಟ ತಂದಿಟ್ಟಿದೆ. ಅಥಣಿ ತಾಲೂಕು ದರೂರ ಗ್ರಾಮದ ವಿದ್ಯಾರ್ಥಿವೋರ್ವನ ಮಾರ್ಕ್ಸ್​ ಕಾರ್ಡ್​, ಪುಸ್ತಕ, ನೋಟ್​ಬುಕ್​ ಎಲ್ಲವೂ ನೀರುಪಾಲಾಗಿವೆ.

books cover with water
author img

By

Published : Aug 19, 2019, 11:00 PM IST

ಬೆಳಗಾವಿ: ಮಹಾ ಮಳೆಗೆ ಜಿಲ್ಲೆಯ ಸಾವಿರಾರು ಜನರ ಬದುಕು ಕೊಚ್ಚಿಕೊಂಡು ಹೋಗಿದೆ. ಜನ ಜಾನುವಾರುಗಳ ಪರಿಸ್ಥಿತಿ ಹೇಳತೀರದಂತಾಗಿದೆ. ಜೊತೆಗೆ ನೂರಾರು ವಿದ್ಯಾರ್ಥಿಗಳ ಅಪಾರ ಪರಿಶ್ರಮವೂ ನೀರು ಪಾಲಾಗಿದೆ.

ಪ್ರವಾಹ ಕಡಿಮೆಯಾದಂತೆ ನಿತ್ಯವೂ ಒಂದೊಂದು ಸಂಕಟದ ಕಥೆಗಳು ಹೊರಬರುತ್ತಿವೆ. ಅಥಣಿ ತಾಲೂಕಿನ ದರೂರ ಗ್ರಾಮದ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಲ್ಲಿಕ್​ ಎಂಬಾತನ ಪುಸ್ತಕಗಳು ನೀರಲ್ಲಿ ನೆಂದು ಹೋಗಿವೆ. ಇದರಿಂದ ವರ್ಷವಿಡೀ ಕಷ್ಟಪಟ್ಟು ಓದಿ, ಬರೆದ ನೋಟ್​ಬುಕ್​ಗಳೇ ನೀರುಪಾಲಾಗಿವೆ. ಮಾರ್ಕ್ಸ್​​ ಕಾರ್ಡ್​ಗಳು ಸಹ ನೀರಿನಲ್ಲಿ ನೆಂದಿವೆ ಎಂದು ವಿದ್ಯಾರ್ಥಿ ಅಳಲನ್ನು ತೋಡಿಕೊಂಡಿದ್ದಾನೆ.

ಒದ್ದೆಯಾದ ಪುಸ್ತಕಗಳು

ಸರ್...ಒಂದು ವರ್ಷದಿಂದ ಕಷ್ಟಪಟ್ಟು ಓದಿದ್ದ ಪುಸ್ತಕಗಳೆಲ್ಲ ಒದ್ದೆಯಾಗಿವೆ. ಅವು ಏನಕ್ಕೂ ಪ್ರಯೋಜನವಾಗುವುದಿಲ್ಲ. ತುಂಬಾ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ ವಿದ್ಯಾರ್ಥಿ ಮಲ್ಲಿಕ್​.

ಈ ಮಧ್ಯೆ ಇಂದು ಪದವಿಪೂರ್ವ ಮಂಡಳಿ ವಿದ್ಯಾರ್ಥಿಗಳು ಮತ್ತೆ ಹೊಸ ಮಾರ್ಕ್​ ಕಾರ್ಡ್ಸ್​ ಮತ್ತು ಮೂಲ ದಾಖಲಾತಿಗಳನ್ನು ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಿದೆ. ಆಯಾ ಜಿಲ್ಲಾ ಡಿಡಿಪಿಯು ಕಚೇರಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಈ ಕುರಿತು ಅರ್ಜಿ ಸಲ್ಲಿಸಬೇಕಿದೆ.

Intro:ಸರ್ ಕಷ್ಟ ಪಟ್ಟು ಓದಿದ್ದು ನೀರಿನಲ್ಲಿ ಕೊಚ್ಚಿ ಹೋಯ್ತು : ವಿದ್ಯಾರ್ಥಿ ಸಂಕಟ

ಬೆಳಗಾವಿ : ಮಹಾ ಮಳೆಗೆ ಸಾವಿರಾರು ಜನರು ಬಾಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಜನ ಜಾನುವಾರುಗಳ ಪರಿಸ್ಥಿತಿ ಹೇಳತೀರದಂತಾಗಿದೆ. ಪ್ರವಾಹ ಕಡಿಮೆಯಾದಮೇಲೆ ದಿನ ನಿತ್ಯವೂ ಒಂದೊಂದು ಸಂಕಟದ ಕಥೆಗಳು ಹೊರಬರುತ್ತಿವೆ.

Body:ಹೌದು ಮಳೆರಾಯನ ಆರ್ಭಟದಿಂದ ಕೃಷ್ಣಾ ಉಕ್ಕಿ ಹರಿದ ಪರಿಣಾಮ ಬೆಳಗಾವಿ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಸುಮಾರು ಹದಿನೈದು ದಿನಗಳಿಂದ ಜನರಿಗೆ ನಿದ್ರೆ ಇಲ್ಲದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ನದಿ ಪ್ರವಾಹದಲ್ಲಿ ಒಬ್ಬ ವಿದ್ಯಾರ್ಥಿಯ ಬದುಕು ಕೊಚ್ಚಿಕೊಂಡು ಹೋಗಿದ್ದು ಬಾಲಕ ಪ್ರವಾಹವನ್ನು ಶಪಿಸುತ್ತ ಸಂಕಟ ಪಡುತ್ತಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಬಡ ಮುಸ್ಲಿಂ ಕುಟುಂಬದ ವಿದ್ಯಾರ್ಥಿ ಮಲಿಕ್ 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವರ್ಷವಿಡೀ ಕಷ್ಟಪಟ್ಟು ಬರೆದಿರುವ ಪುಸ್ತಕ ನೀರುಪಾಲಾಗಿದ್ದು ವಿದ್ಯಾರ್ಥಿಯ ಸಂಕಟ ಹೇಳತೀರದಂತಾಗಿದೆ. ಸರ್ ಒಂದು ವರ್ಷದಿಂದ ಕಷ್ಟಪಟ್ಟು ಓದಿದ್ದ ಎಲ್ಲಾ ಪುಸ್ತಕಳು ನೀರಿನಲ್ಲಿ ಒದ್ದೆ ಆಗಿದ್ದು ತುಂಬಾ ನೋವಾಗುತ್ತಿದೆ ಎಂದಾಗ ಸಾಮಾನ್ಯವಾಗಿ ಬೇಸರವಾಗುದಂತು ಸುಳ್ಳಲ್ಲ.

Conclusion:ಮನೆಯ ವಸ್ತುಗಳು ಸಂಪೂರ್ಣ ಹಾನಿಯಾಗಿ ಬದುಕು ಮುಳುಗಿರುವುದು ಒಂದುಕಡೆಯಾದರೆ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ ಎಲ್ಲಾ ಪುಸ್ತಕಗಳು ನೀರಿನಲ್ಲಿ ಹಾಳಾಗಿದ್ದು, ನದಿ ಪಾತ್ರದ ಜನರ ಗೋಳು ಕೇಳುವವರಾರು ಎಂಬ ಪ್ರಶ್ನೆ ಉದ್ಭವವಾಗಿದೆ.

ಬೈಟ್ : ಮಲಿಕ್

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.