ETV Bharat / state

ಕೊರೊನಾ ಸೋಂಕಿತನಿಗೆ ಬ್ಲಾಕ್​ ಫಂಗಸ್.. ಸರ್ಕಾರದ ನೆರವಿಗಾಗಿ ಕುಟುಂಬಸ್ಥರ ಮನವಿ

ಸದ್ಯ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಚಿಕಿತ್ಸೆ ಪಡೆಯುತ್ತಿದ್ದು, ಕೊರೊನಾದಿಂದ ಗುಣಮುಖರಾದ ಬಳಿಕ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ತಮ್ಮ ನೆರವಿಗೆ ಬರುವಂತೆ ಸೋಂಕಿತ ಆನಂದನ ಕುಟುಂಬಸ್ಥರು ಮನವಿ ಮಾಡಿದ್ದಾರೆ..

black-fungus
ಬ್ಲಾಕ್​ ಫಂಗಸ್
author img

By

Published : May 16, 2021, 5:45 PM IST

ಚಿಕ್ಕೋಡಿ : ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ನಿವಾಸಿ‌ ಆನಂದ ಕುಲಾಲಿ (30 ವರ್ಷ) ಎಂಬ ಯುವಕ‌ ಬ್ಲಾಕ್​ ಫಂಗಸ್‌ನಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾರೆ.

ಅಥಣಿ ತಾಲೂಕು ಪಂಚಾಯತ್‌ನಲ್ಲಿ ಕೆಲಸ ಮಾಡುತ್ತಿದ್ದ ಆನಂದ ಕುಲಾಲಿ ಅವರಿಗೆ ಮೇ 5ರಂದು ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಅವರಿಗೆ ಮೇ‌ 7ರಂದು ಕೊರೊನಾ ದೃಢವಾಗಿತ್ತು.

ಉಸಿರಾಟ ಸಮಸ್ಯೆಯಿಂದ ಹುಕ್ಕೇರಿ ತಾಲೂಕು ಆಸ್ಪತ್ರೆಗೆ ದಾಖಲಾದ ಅವರಿಗೆ ಅಲ್ಲಿನ ವೈದ್ಯರು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಹೀಗಾಗಿ, ಮೇ 10 ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಕೊರೊನಾ ಸೋಂಕಿತನಿಗೆ ಬ್ಲಾಕ್​ ಫಂಗಸ್ ಭೀತಿ..

ಇದಾದ ನಂತರ ಮುಖದಲ್ಲಿ ಬಾವು ಬರುತ್ತಿದ್ದು, ಇಎನ್‌ಟಿ ಸ್ಪೆಷಲಿಸ್ಟ್ ಬಳಿ ತೆರಳಲು ಸಲಹೆ ನೀಡಿದ್ದರು. ನಂತರ ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಾದ ಆನಂದನಿಗೆ ಬ್ಲಾಕ್​​ ಫಂಗಸ್ ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಚಿಕಿತ್ಸೆ ಪಡೆಯುತ್ತಿದ್ದು, ಕೊರೊನಾದಿಂದ ಗುಣಮುಖರಾದ ಬಳಿಕ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ತಮ್ಮ ನೆರವಿಗೆ ಬರುವಂತೆ ಸೋಂಕಿತ ಆನಂದನ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಓದಿ: ಬ್ಲ್ಯಾಕ್ ಫಂಗಸ್‌ಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಾವು ಸಾಧ್ಯತೆ: ಡಾ.ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.