ಬೆಳಗಾವಿ : ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿರುವ ಬಗ್ಗೆ ಈವರೆಗೂ ಖಚಿತ ಮಾಹಿತಿ ಇಲ್ಲ. ಖಾಸಗಿ ವ್ಯಕ್ತಿಗಳು ಹಾಗೂ ಸಂಬಂಧಿಕರು ಈ ರೀತಿಯ ಸುದ್ದಿ ಹರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪತ್ತೆ ಆಗಿರುವ ಬಗ್ಗೆ ಕೆಲ ಮಾಧ್ಯಮ ಹಾಗೂ ಪತ್ರಿಕೆಗಳ ವರದಿ ನೋಡಿದ್ದೇನೆ.
ಈ ಬಗ್ಗೆ ಬೆಳಗಾವಿ ಡಿಹೆಚ್ಒ ಹಾಗೂ ಚಿಕ್ಕೋಡಿ ಎಡಿಹೆಚ್ಒ ಬಳಿ ಮಾತನಾಡಿದಾಗ ಬ್ಲಾಕ್ ಫಂಗಸ್ ಕೇಸ್ ಇರುವ ಬಗ್ಗೆ ವರದಿ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ, ಜಿಲ್ಲೆಯ ಜನ ಹೆದರಬೇಕಿಲ್ಲ ಎಂದು ಮನವಿ ಮಾಡಿದ್ದಾರೆ.
ಓದಿ:ಸಂಕೇಶ್ವರದ ಓರ್ವ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್: ಬಿಜೆಪಿ ವಕ್ತಾರ ಎಂ.ಬಿ. ಝೀರಲಿ