ETV Bharat / state

ಬಂಜಾರ ಸಮುದಾಯಕ್ಕೆ 51 ಸಾವಿರ ಹಕ್ಕುಪತ್ರ ಕೊಟ್ಟಿದ್ದು ಬಿಜೆಪಿ, ಇದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ: ಸಿಎಂ ಬೊಮ್ಮಾಯಿ

ಗೋಕಾಕ ನಗರದಲ್ಲಿ ವಿವಿಧ ಯೋಜನೆ ಅಭಿವೃದ್ಧಿ ಕಾಮಗಾರಿಗೆ ಸಿಎಂ ಭೂಮಿಪೂಜೆ:ಲೋಕಾಯುಕ್ತ ಇಲಾಖೆಯನ್ನು ಬಲಿಷ್ಠ ಮಾಡಿದ್ದು ಬಿಜೆಪಿ ಸರ್ಕಾರ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಲೋಕಾಯುಕ್ತನ್ನೂ ನಿಷ್ಕ್ರಿಯ ಮಾಡಿದ್ದರು- ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ.

CM Basavaraj Bommai spoke at the function held at Gokak.
ಗೋಕಾಕದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದರು.
author img

By

Published : Mar 28, 2023, 11:08 PM IST

ಚಿಕ್ಕೋಡಿ: ಕರ್ನಾಟಕದ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆ ಪ್ರಮುಖ ಸ್ಥಾನ ವಹಿಸಿದೆ. ಇಲ್ಲಿ ಏನು ನಿರ್ಣಯ ಆಗುತ್ತೋ, ಅದು ಕರ್ನಾಟದಲ್ಲಿ ತೀರ್ಮಾನ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿ ಜಿಲ್ಲೆಯ ಗೋಕಾಕ್​, ಅರಭಾವಿ, ಅಥಣಿ ಮತಕ್ಷೇತ್ರ ವ್ಯಾಪ್ತಿಗೆ ಬರುವ ಘಟ್ಟಿ ಬಸವಣ್ಣ ಡ್ಯಾಂ, ಗೋಕಾಕ್​ ನಗರದ ಘಟಪ್ರಭಾ ಪ್ರವಾಹ ತಡೆಗೆ ತಡೆಗೋಡೆ ಮತ್ತು ಅಥಣಿ ತಾಲೂಕಿನ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಗೆ ಗೋಕಾಕ್​ ನಗರದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಬರುವ 18 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು. ಬೆಳಗಾವಿ ಜಿಲ್ಲೆ ಗಂಡುಮೆಟ್ಟಿದ ಸ್ಥಳ. ನಾಡು ಸ್ವಾಭಿಮಾನಿಗಳ ಸ್ಥಳ. ಇದು ಕಷ್ಟಪಟ್ಟು ದುಡಿಯುವ ರೈತರ ಜಿಲ್ಲೆ. ನಿಮ್ಮ ಆಶೀವಾದದಲ್ಲಿ ಬಹುದೊಡ್ಡ ಶಕ್ತಿ ಇದೆ. ನೀವು ಬದಲಾಗಬೇಕು. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡೋಣ ಎಂದು ಪ್ರಶಂಸಿಸಿದರು.

51 ಸಾವಿರ ಹಕ್ಕು ಪತ್ರ ವಿತರಣೆ:ಬಂಜಾರ ಸಮುದಾಯಕ್ಕೆ ಹಕ್ಕುಪತ್ರ ಕೊಟ್ಟಿದ್ದೇ ನಮ್ಮ ಬಿಜೆಪಿ ಸರ್ಕಾರ, ಆ ಸಮುದಾಯ ಕಲ್ಲು ಪ್ರದೇಶದಲ್ಲಿ ವಾಸಿಸುವ ಜನಾಂಗಕ್ಕೆ ನ್ಯಾಯ ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 51 ಸಾವಿರ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇದರಲ್ಲೂ ರಾಜಕಾರಣ ಮಾಡುತ್ತಿದೆ. ಇವತ್ತು ಕಾಂಗ್ರೆಸ್ ಪಕ್ಷ ಶಕುನಿ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಸಂಘಟನೆಗಳಿಗೆ ಸಹಾಯಧನ ನೀಡುತ್ತಿದ್ದೇವೆ. ವಿವಿಧ ಇಲಾಖೆ ಹಾಗೂ ಖಾಸಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ 13 ಲಕ್ಷ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ. ದೇಶದಲ್ಲೇ ರಾಜ್ಯದ ಯುವಜನರಿಗೆ ಹೆಚ್ಚು ಉದ್ಯೋಗ ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ಸಿಎಂ ಹೇಳಿದರು.

ಆದರೆ ಕಾಂಗ್ರೆಸ್​ನವರು ಬರೀ ಸುಳ್ಳು ಹೇಳುತ್ತಾರೆ, ಆದರೆ ಬಸವರಾಜ ಬೊಮ್ಮಾಯಿಗೆ ನಾಯಿ ಶಕುನಿ ಎನ್ನುತ್ತಾರೆ. ಕಾಂಗ್ರೆಸ್​ದವರಿಗೆ ನಾನು ಹೇಳುತ್ತೇನೆ. ನಾನೂ ನಾಯಿ.. ಕರ್ನಾಟಕ ಏಳು ಕೋಟಿ ಜನರ ಕಾರ್ಯವನ್ನು ನಿಯತ್ತಾಗಿ ಮಾಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ ಎಸ್ಪಿ ಜನರಿಗೆ ನೀವು ಮೀಸಲಾತಿ ನೀಡಲಿಲ್ಲ, ಇವತ್ತು ನಾವು ನೀಡಿದ್ದೇವೆ. ಕಾಂಗ್ರೆಸ್ ಶಾಸಕರು ಸಾಲು ಸಾಲಾಗಿ ಹಣ ತೆಗೆದುಕೊಂಡು ಭ್ರಷ್ಟಾಚಾರ ಮಾಡಿದ್ದಾರೆ. ಅವರ ವಿರುದ್ಧ ಸಿದ್ದರಾಮಯ್ಯ ಹಾಗೂ ಡಿಕೆಸಿ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಲೋಕಾಯುಕ್ತ ಇಲಾಖೆಯನ್ನೂ ಬಲಿಷ್ಠ ಮಾಡಿದ್ದೇ ಬಿಜೆಪಿ ಸರ್ಕಾರ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಲೋಕಾಯುಕ್ತ ನಿಷ್ಕ್ರಿಯ ಮಾಡಿದ್ದರು. ಲೋಕಾಯುಕ್ತ ಇದ್ದರೆ ಕಾಂಗ್ರೆಸ್​​ನವರು ಸಾಲು ಸಾಲು ಜೈಲಿಗೆ ಹೊಗುತಿದ್ದರು. ಇನ್ನು ಅವರ ವಿರುದ್ಧ 60 ಪ್ರಕರಣಗಳು ಬಾಕಿ ಇವೆ ಎಂದು ಹೇಳಿದರು.

ಶಾಸಕ ಮಹೇಶ್ ಕುಮಠಳ್ಳಿ ಮಾತು ಕಮ್ಮಿ, ಆದರೆ ಅವರ ಕಾರ್ಯಗಳು ಹೆಚ್ಚು. ಅವರ ಕೆಲಸಗಳು ಮಾತನಾಡ್ತಿವೆ. ಜನಪರ ಕಾರ್ಯಗಳನ್ನು ಮಾಡಿದ್ದೇವೆ, ನಮ್ಮದು ದೇಶವನ್ನು ಸಂರಕ್ಷಿಸುವ ಪಕ್ಷ ಎಂದರು.

ಇದನ್ನೂಓದಿ:ಲಂಬಾಣಿ ಸಮುದಾಯದ ನಾಯಕರನ್ನು ಬಿಜೆಪಿ ಬ್ಲ್ಯಾಕ್​​​​ಮೇಲ್ ಮಾಡ್ತಿದೆ: ಪ್ರಕಾಶ್ ರಾಠೋಡ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.