ಬೆಳಗಾವಿ: ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ದೆಹಲಿಯಲ್ಲಿ ವಿಧಿವಶರಾಗಿದ್ದ ಸುರೇಶ ಅಂಗಡಿ ಅವರಿಗೆ ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ಶೃದ್ಧಾಂಜಲಿ ಸಲ್ಲಿಸಿದರು.
ವಿಶ್ವೇಶ್ವರಯ್ಯ ನಗರದ ಅಂಗಡಿ ಅವರ ನಿವಾಸದ ಎದುರು ಭಾವ ಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಬಿಜೆಪಿ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಶ್ರದ್ಧಾಂಜಲಿ ಸಮರ್ಪಿಸಿದರು.
ಅಂಗಡಿ ಅಗಲಿಕೆಗೆ ಚಿಕ್ಕಮ್ಮನ ಕಣ್ಣೀರು
ಸುರೇಶ್ ಅಂಗಡಿಯವರ ಅಗಲಿಕೆಯಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸುರೇಶ್ ಅಂಗಡಿಯವರನ್ನು ನೆನೆದು ಅವರ ಚಿಕ್ಕಮ್ಮ ಕಣ್ಣೀರು ಹಾಕಿದರು. ಬೈಲಹೊಂಗಲ ತಾಲೂಕಿನ ದಾಸ್ತಿಕೊಪ್ಪ, ಇಟಗಿ ಗ್ರಾಮದಿಂದ ಸಂಬಂಧಿಕರು ಆಗಮಿಸಿದ್ದಾರೆ.