ETV Bharat / state

ಕೊರೊನಾ ನೆಪ: ಎದೆನೋವಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನಿರಾಕರಿಸಿದ ಬಿಮ್ಸ್ - BIMS Hospital misconception

ಬಿಮ್ಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಒಂದಿಲ್ಲೊಂದು ಎಡವಟ್ಟು ಪ್ರಸಂಗಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇಂದು ಎದೆನೋವು ಹಾಗು ಕೆಮ್ಮಿನಿಂದ ಬಳಲುತ್ತಿದ್ದ ವೃದ್ಧರೊಬ್ಬರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

BIMS refuse treatment for a chest pain and Coughing  patient
ಮಾನವೀಯತೆ ಮರೆತ ಬಿಮ್ಸ್...ಎದೆನೋವಿನಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನಿರಾಕರಣೆ
author img

By

Published : Jul 22, 2020, 4:31 PM IST

ಬೆಳಗಾವಿ: ಕಣಬರಗಿಯ ವೃದ್ಧರೊಬ್ಬರು ಎದೆನೋವು ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು ಬಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿರುವ ಘಟನೆ ನಡೆದಿದೆ. ಇಲ್ಲಿ ಕೊರೊನಾ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂಬ ನೆಪವೊಡ್ಡಿ ಆಸ್ಪತ್ರೆಗೆ ಕರೆತಂದಿದ್ದ ರೋಗಿಗೆ ವಾಪಸ್‌ ಕಳುಹಿಸಲಾಗಿದೆ.

ಅಲ್ಲದೆ ತೀವ್ರ ಆರೋಗ್ಯ ಸಮಸ್ಯೆ ಇರುವ ವೃದ್ಧನನ್ನು ಆಸ್ಪತ್ರೆಯ ಮುಂಭಾಗದಲ್ಲಿಯೇ ನಿಲ್ಲಿಸಿ ಅಮಾನವೀಯವಾಗಿ ವರ್ತಿಸಲಾಗಿದ್ದು, ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

ಎದೆನೋವಿನಿಂದ ಬಳಲುತ್ತಿದ್ದ ರೋಗಿಗೆ ಬಿಮ್ಸ್‌ನಲ್ಲಿ ಚಿಕಿತ್ಸೆ ನಿರಾಕರಣೆ

ಕಳೆದ ಹಲವು ದಿನಗಳಿಂದ ಸಿವಿಲ್ ಆಸ್ಪತ್ರೆಯಲ್ಲಿ ಜನಸಾಮಾನ್ಯರು, ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಲೇ ಇದ್ದವು. ಈ ದೂರುಗಳ ಸರಮಾಲೆಗೆ ಇವತ್ತು ನಡೆದ ಘಟನೆ ಹೊಸ ಉದಾಹರಣೆ.

ವೃದ್ಧ ರೋಗಿಯನ್ನು ದಾಖಲಿಸಲು ಖಾಸಗಿ ಆಸ್ಪತ್ರೆಗಳಿಗೆಲ್ಲಾ ಸಂಬಂಧಿಕರು ಸುತ್ತಾಡಿದ್ದಾರೆ. ಅಲ್ಲೆಲ್ಲೂ ದಾಖಲಿಸಿಕೊಳ್ಳದ ಕಾರಣ ಅವರು ಬಿಮ್ಸ್‌ಗೆ ಬಂದಿದ್ದರು. ಆದರೆ ಇಲ್ಲಿಯೂ ಚಿಕಿತ್ಸೆ ಸಿಗದೆ ರೋಗಿಯನ್ನು ಮತ್ತೆ ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.