ಬೈಲಹೊಂಗಲ(ಬೆಳಗಾವಿ): ಪಟ್ಟಣದ ಹೊಸೂರ ರಸ್ತೆಯ ಸಿದ್ದೇಶ್ವರ ಗಾರ್ಡನ್ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಹೊಸೂರ ಗ್ರಾಮದ ಬಸವರಾಜ ಈರಪ್ಪ ಹುಡೇದ (42) ಮೃತ ದುರ್ದೈವಿ. ಇನ್ನೋರ್ವ ಬೈಕ್ ಸವಾರ ದುಂಡಪ್ಪ ಪನದಿ (50) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸವರಾಜ ಹುಡೇದ ಬೈಲಹೊಂಗಲದಿಂದ ಹೊಸೂರ ಕಡೆಗೆ ಹೋಗುತ್ತಿದ್ದರು. ದುಂಡಪ್ಪ ಪನದಿ ಹೊಸೂರದಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದರು. ಈ ವೇಳೆ ಸಿದ್ದೇಶ್ವರ ಗಾರ್ಡನ್ ಬಳಿ ಅವಘಡ ಸಂಭವಿಸಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.