ETV Bharat / state

ಗ್ರಾ.ಪಂ ಅಧ್ಯಕ್ಷೆ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲು - criminal case in belgavi

ಸರ್ಕಾರಿ ಜಾಗದ ಮೇಲೆ ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗ ಮಾಡಿಕೊಂಡ ಆರೋಪದ ಅಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಪ್ರಿಯಾ ಕಡೋಲೆ ಮೇಲೆ ಪ್ರಕರಣ ದಾಖಲಾಗಿದೆ.

bhoja village-panchayat-charged-with-criminal-case-in-belgavi
ಗ್ರಾ.ಪಂ ಅಧ್ಯಕ್ಷೆ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲು
author img

By

Published : Mar 15, 2020, 10:07 PM IST

ಚಿಕ್ಕೋಡಿ: ಸರ್ಕಾರಿ ಜಾಗದ ದುರುಪಯೋಗದ ಆರೋಪದ ಹಿನ್ನಲೆ ಅಧ್ಯಕ್ಷೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮದಲ್ಲಿ ನಡೆದಿದೆ.

ಗ್ರಾ.ಪಂ ಅಧ್ಯಕ್ಷೆ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲು

ನಕಲಿ ದಾಖಲೆ ಸೃಷ್ಟಿಸಿ ಉತಾರಾ ನೀಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಪ್ರಿಯಾ ಕಡೋಲೆ ಮೇಲೆ ಪ್ರಕರಣ ದಾಖಲಾಗಿದೆ. ಪಂಚಾಯಿತಿ‌ ವ್ಯಾಪ್ತಿಯ ಸರ್ಕಾರಿ ಗಾಯರಾಣ ಜಾಗಕ್ಕೆ ನಕಲಿ‌ ದಾಖಲೆ ಸೃಷ್ಟಿಸಿ ಉತಾರ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ 16 ಜನ ಫಲಾನುಭವಿಗಳನ್ನು ಗುರುತಿಸಿ, ನಕಲಿ‌ ದಾಖಲೆ‌ ನೀಡಿದ್ದಾರೆ. ಈ ಕುರಿತು ಸದಲಗಾ ಪೋಲಿಸ್ ಠಾಣೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ ದೂರು ಸಲ್ಲಿಸಿದ್ದಾರೆ.

ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೂ ನಕಲಿ ದಾಖಲೆ ನೀಡಿದ ಹಿನ್ನೆಲೆ ಎರಡನೇ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಆಯುಕ್ತರು ಸೂಚಿಸಿದ‌್ದರು. ಆದರೆ, ಸುಪ್ರಿಯಾ ಅವರು ಆರೋಗ್ಯದ ನೆಪ ಹೇಳಿ ವೈದ್ಯರು 30 ದಿನ ವಿಶ್ರಾಂತಿ‌‌ ನೀಡಿದ್ದಾರೆ ಎಂದು ನಕಲಿ‌ ವೈದ್ಯಕಿಯ ಸರ್ಟಿಫಿಕೇಟ್ ನೀಡಿದ ಹಿನ್ನೆಲೆ, ಸುಪ್ರೀಯಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಅಧ್ಯಕ್ಷೆ ಸುಪ್ರಿಯಾ ವಿರುದ್ಧ ಐಪಿಸಿ 420, 465, 471, 34, 468 ಅಡಿಯಲ್ಲಿ ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.