ETV Bharat / state

ಕಚ್ಚಾ ಬಾಂಬ್ ಬಳಸಿ ಕಾಡು ಪ್ರಾಣಿಗಳ ಬೇಟೆ: ಬೆಳಗಾವಿಯಲ್ಲಿ ಮೂವರು ಆರೋಪಿಗಳು ಅಂದರ್​

ಬೆಳಗಾವಿಯ ಕಿತ್ತೂರು-ಕುಲವಳ್ಳಿ ಅರಣ್ಯ ಪ್ರದೇಶದಲ್ಲಿ ಕಚ್ಚಾ ಬಾಂಬ್​ ಬಳಸಿ ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

author img

By

Published : Jul 7, 2021, 11:43 AM IST

ಮೂವರು ಆರೋಪಿಗಳ ಬಂಧನ
accused arrest

ಬೆಳಗಾವಿ: ಕಚ್ಚಾ ಬಾಂಬ್​​​ ಬಳಸಿಕೊಂಡು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ತಾಲೂಕು ಕರೀಕಟ್ಟಿ ಗ್ರಾಮದ ಬಸವರಾಜ ಲಕ್ಕಪ್ಪ ಬೊರಿಮರ (35), ದುರಗಪ್ಪ ಬರಮಪ್ಪ ಬೊರಿಮರದ (26), ಸತ್ಯಪ್ಪ ಯಲ್ಲಪ್ಪ ಬುಡರಿ (50)ಬಂಧಿತ ಆರೋಪಿಗಳು.

ಇವರು ಕಚ್ಚಾ ಬಾಂಬ್ ಸೇರಿದಂತೆ ವಿವಿಧ ಆಯುಧಗಳನ್ನು ಬಳಸಿ ಕಿತ್ತೂರು-ಕುಲವಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟೆ ಆಡುತ್ತಿದ್ದರು. ಆರೋಪಿಗಳು ನಿನ್ನೆ ಕೂಡ ಗೋಲಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಪ್ರಾಣಿಗಳ ಬೇಟೆಗಿಳಿದಿದ್ದರು. ಈ ಕುರಿತಂತೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.

ಬಂಧಿತರಿಂದ ಬೇಟೆ ಆಡಿದ ಮೊಲ, 48 ನಾಡ ಕಚ್ಚಾ ಬಾಂಬ್‍ಗಳು, 2 ಬೈಕ್, ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.