ಬೆಳಗಾವಿ : ನಿನ್ನೆ ತಾನೇ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿ ಕೊರೊನಾ ವೈರಸ್ ಸೋಂಕು ಭೀಕರತೆ ಸೃಷ್ಟಿಸುತ್ತಿದೆ. ಇದರ ಕಡಿವಾಣಕ್ಕೆ ಸಾಮಾಜಿಕ ಅಂತರವೇ ಮದ್ದು. ಹೀಗಾಗಿ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವ ಮೂಲಕ ಇನ್ನೂ 21 ದಿನ ಮನೆಯಲ್ಲೇ ಇರಬೇಕು ಎಂದು ಮನವಿ ಮಾಡಿದ್ರೂ ಜನ ಅದಕ್ಕೆ ಬೆಲೆ ಕೊಡದೇ ಯುಗಾದಿ ಹಬ್ಬದ ವಸ್ತುಗಳನ್ನು ಖರೀದಿಸಲು ಮುಗಿಬೀಳ್ತಿದ್ದಾರೆ.
ಲಾಕ್‌ಡೌನ್ ಆದೇಶಕ್ಕೆ ಬೆಲೆ ನೀಡದೇ ಜನತೆ ಹಬ್ಬಕ್ಕಾಗಿ ಹೂವು, ಬೇವು, ಮಾವಿನ ಎಲೆ ಹಾಗೂ ತರಕಾರಿ ತೆಗೆದುಕೊಳ್ಳಲು ತಮ್ಮ ಸುರಕ್ಷತೆಯನ್ನೂ ಅರಿಯದೇ, ಯಾವುದೇ ಮಾಸ್ಕ್‌ಗಳನ್ನೂ ಧರಿಸದೇ ಗುಂಪು ಗುಂಪಾಗಿ ಸೇರುವ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ತೊಡಗಿದ್ದಾರೆ. ಇದನ್ನೆಲ್ಲ ನೋಡಿದರೆ ಜನರು ಎಷ್ಟು ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿದೆ.