ETV Bharat / state

ಬೆಳಗಾವಿ ಘರ್ಷಣೆ: ಕೊಲೆಯಾದ ಸತೀಶ್ ಪಾಟೀಲ್ ಅಂತ್ಯಕ್ರಿಯೆ, ಪೋಷಕರ ಆಕ್ರಂದನ - belagavi goundawada village clash

ಬೆಳಗಾವಿಯ ಗೌಂಡವಾಡ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಕೊಲೆಗೀಡಾದ ಸತೀಶ್ ಪಾಟೀಲ್ ಅಂತ್ಯಕ್ರಿಯೆ ಗ್ರಾಮದ ಹೊರವಲಯದ ಸ್ಮಶಾನದಲ್ಲಿ ನಡೆದಿದೆ.

belagavi-clash-satish-patil-funeral-in-goundawada-village
ಬೆಳಗಾವಿ ಘರ್ಷಣೆ: ಕೊಲೆಯಾದ ಸತೀಶ್ ಪಾಟೀಲ್ ಅಂತ್ಯಕ್ರಿಯೆ, ಪೋಷಕರ ಆಕ್ರಂದನ
author img

By

Published : Jun 19, 2022, 9:02 PM IST

ಬೆಳಗಾವಿ: ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಕಾರು ಪಾರ್ಕಿಂಗ್ ಮತ್ತು ದೇವಸ್ಥಾನ ಜಾಗದ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ಕೊಲೆಗೀಡಾದ ಸತೀಶ್ ಪಾಟೀಲ್ ಅಂತ್ಯಕ್ರಿಯೆ ಗ್ರಾಮದ ಹೊರವಲಯದ ಸ್ಮಶಾನದಲ್ಲಿ ನಡೆದಿದೆ. ಈ ವೇಳೆ ತಾಯಿ ನಳಿನಿ ಪಾಟೀಲ್, ಪತ್ನಿ ಸ್ನೇಹಾ ಪಾಟೀಲ್​ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಶುಕ್ರವಾರ ರಾತ್ರಿ ಸತೀಶ್ ಪಾಟೀಲ್ ಹತ್ಯೆಯಾಗಿತ್ತಲ್ಲದೆ, ಬಳಿ‌ಕ ಗ್ರಾಮದಲ್ಲಿ ಹಿಂಸಾಚಾರ ನಡೆದು ಹತ್ತಕ್ಕೂ ಹೆಚ್ಚು ವಾಹನಗಳು, ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಸುದ್ದಿ ತಿಳಿದ ಪೊಲೀಸರು ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಈ ಕೊಲೆ ಪ್ರಕರಣದಲ್ಲಿ ಈವರೆಗೆ 7 ಜನ ಆರೋಪಿಗಳು ಹಾಗೂ ಬೆಂಕಿ, ದೊಂಬಿ ಪ್ರಕರಣ ಸಂಬಂಧ 19 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಸತೀಶ್ ಪಾಟೀಲ್ ಅಂತ್ಯಕ್ರಿಯೆ

ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸತೀಶ್​​ ಪಾಟೀಲ್​ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಭಾನುವಾರ ಸಂಜೆ 5 ಗಂಟೆಯ ಸುಮಾರಿಗೆ ಸ್ವಗ್ರಾಮಕ್ಕೆ ತರಲಾಗಿತ್ತು.

ಇದನ್ನೂ ಓದಿ: ಬೆಳಗಾವಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಓರ್ವನ ಕೊಲೆ, ಹತ್ತಾರು ವಾಹನಗಳಿಗೆ ಬೆಂಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.