ETV Bharat / state

ಅಥಣಿಯಲ್ಲೂ ನೂತನ ಕೊರೊನಾ ಚಿಕಿತ್ಸಾ ಘಟಕ: ಸೋಂಕಿತರಿಗೆ ಟ್ರೀಟ್​ಮೆಂಟ್​

ಬೆಳಗಾವಿ ಜಿಲ್ಲೆಯಲ್ಲಿ ನಿಗದಿತ ಕೋವಿಡ್ ಆಸ್ಪತ್ರೆ ತಾಲೂಕಿನಿಂದ ದೂರವಾಗುವುದರಿಂದ ಅಥಣಿ ಪಟ್ಟಣದಲ್ಲೇ ಕೊರೊನಾ ಚಿಕಿತ್ಸಾ ಘಟಕವನ್ನು ಸರ್ಕಾರ ನಿರ್ದೇಶನದಂತೆ ರೂಪಿಸಲಾಗಿದೆ. ತಾಲೂಕು ಹೊರವಲಯದಲ್ಲಿರುವ ರಾಣಿ ಚೆನ್ನಮ್ಮ ಹಾಸ್ಟೆಲ್​ ಅನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿ 30 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಹಾಗೂ ಸೋಂಕಿಗೆ ಒಳಗಾದವರಿಗೆ ಅಥಣಿಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ

author img

By

Published : Jul 18, 2020, 8:24 AM IST

Belagavi: A new covid caring center to start in Athani
ಬೆಳಗಾವಿ: ನೂತನ ಕೊರೊನಾ ಚಿಕಿತ್ಸಾ ಘಟಕಕ್ಕೆ ಸಾಕ್ಷಿಯಾಗುತ್ತಿದೆ ಅಥಣಿ ಪಟ್ಟಣ

ಅಥಣಿ(ಬೆಳಗಾವಿ): ತಾಲೂಕಿನ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿರುವ ಕೊರೊನಾ ಸೋಂಕು ದಿನೇ ದಿನೆ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಬೆಳಗಾವಿ ಜಿಲ್ಲೆಯ ಐದು ತಾಲೂಕುಗಳನ್ನು ಸೀಲ್​ಡೌನ್ ಮಾಡಲಾಗಿದೆ. ಇದರಲ್ಲಿ ಅಥಣಿ ತಾಲೂಕಿನ 24 ಕಡೆ ಚೆಕ್ ಪೋಸ್ಟ್ ನಿರ್ಮಿಸಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಥಣಿ ತಹಶೀಲ್ದಾರ್​ ದುಂಡಪ್ಪ ಕೋಮಾರ ಮಾಹಿತಿ ನೀಡಿದರು.

ನೂತನ ಕೊರೊನಾ ಚಿಕಿತ್ಸಾ ಘಟಕಕ್ಕೆ ಸಾಕ್ಷಿಯಾಗುತ್ತಿದೆ ಅಥಣಿ ಪಟ್ಟಣ
ತಾಲೂಕಿನ ಮಿನಿ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ದುಂಡಪ್ಪ ಕೋಮಾರ, ತಾಲೂಕಿನಲ್ಲಿ ಒಟ್ಟು 157 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 11 ಜನ ಮೃತಪಟ್ಟಿದ್ದು, ಸೋಂಕಿನಿಂದ ಗುಣಮುಖವಾದ 36 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಅಥಣಿ ತಾಲೂಕು ಮಹಾರಾಷ್ಟ್ರದ ಗಡಿ ಹೊಂದಿರುವುದರಿಂದ ಅಥಣಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳನ್ನು ಬಂದ್​ ಮಾಡಿ 24 ಕಡೆ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಹಾಗೂ ತಾಲೂಕಿಗೆ ಒಳ ಪ್ರವೇಶ ಹಾಗೂ ನಿರ್ಗಮನ ಅವಕಾಶವನ್ನು ನಿರ್ಬಂಧಿಸಲಾಗಿದೆ ಎಂದು ತಹಶೀಲ್ದಾರ್​​ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನಿಗದಿತ ಕೋವಿಡ್ ಆಸ್ಪತ್ರೆ ತಾಲೂಕಿನಿಂದ ದೂರವಾಗುವುದರಿಂದ ಅಥಣಿ ಪಟ್ಟಣದಲ್ಲೇ ಕೊರೊನಾ ಚಿಕಿತ್ಸಾ ಘಟಕವನ್ನು ಸರ್ಕಾರ ನಿರ್ದೇಶನದಂತೆ ರೂಪಿಸಲಾಗಿದೆ. ತಾಲೂಕು ಹೊರವಲಯದಲ್ಲಿರುವ ರಾಣಿ ಚೆನ್ನಮ್ಮ ಹಾಸ್ಟೆಲ್​ ಅನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿ 30 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿಗೆ ಒಳಗಾದವರಿಗೆ ಅಥಣಿಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.