ETV Bharat / state

ಪಂಚಮಸಾಲಿ ಪೀಠಕ್ಕೆ ಸಚಿವ ನಿರಾಣಿ ನೀಡಿರುವ ಕಾಣಿಕೆಗಳನ್ನೆಲ್ಲ ಮರಳಿಸುವೆ : ಕೂಡಲಸಂಗಮ ಶ್ರೀ

author img

By

Published : Feb 2, 2022, 6:45 PM IST

ಹದಿನಾಲ್ಕು ವರ್ಷ ನನ್ನ ಸಾಕಿ ಬೆಳೆಸಿದ್ದು ಭಕ್ತರು, ಯಾವ ವ್ಯಕ್ತಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಬರುತ್ತಿದ್ದರೂ ಸಚಿವ ಮುರಗೇಶ್ ನಿರಾಣಿ ಮೌನವಹಿಸಿದ್ದಾರೆ ಎಂದರೆ ಏನರ್ಥ?. ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೆ ಫೋಸ್ಟ್ ಮಾಡಿದರೆ ನಮಗೆ ನೋವಾಗುತ್ತದೆ. ಮಠಕ್ಕೆ ಏನೇನು‌ ಕೊಟ್ಟಿದ್ದಾರೆ ಎಂದು ಸಚಿವರು ಪಟ್ಟಿ ನೀಡಲಿ. ಅವುಗಳನ್ನು ನಾನು ಮರಳಿಸುತ್ತೇನೆ..

basava-mruthyunjaya-swamiji
ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು

ಬೆಳಗಾವಿ : ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಗಾಂಧಿಭವನದಲ್ಲಿ ನಡೆದ ಅಖಿಲ ಕರ್ನಾಟಕ ರಾಜ್ಯಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಳ್ಳಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಒತ್ತಾಯ ಕೇಳಿ ಬಂದಿವೆ.

ಕಳೆದ ಒಂದು ವರ್ಷದಿಂದ ನಿರಂತರವಾಗಿ ಮೀಸಲಾತಿಗಾಗಿ ಹೋರಾಟ ನಡೆದಿದೆ. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಂಡಿದ್ದೇವೆ ಎಂದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕುರಿತಂತೆ ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿರುವುದು..

ಬಜೆಟ್ ಮುನ್ನವೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಬಜೆಟ್ ಅಧಿವೇಶನದೊಳಗೆ ಮೀಸಲಾತಿ ನೀಡಬೇಕು.

ಸಮಾಜ ಒಡೆಯುತ್ತಿರುವ ಕುತಂತ್ರಿಗಳ‌ನ್ನು ನಿರ್ಲಕ್ಷ್ಯಿಸುವುದು ಹಾಗೂ ಸಚಿವ ಮುರಗೇಶ್ ನಿರಾಣಿ ಹೆಸರಲ್ಲಿ ಕೂಡಲಸಂಗಮ ಶ್ರೀಪೀಠಕ್ಕೆ ಕೊಟ್ಟಂತ ವಸ್ತುಗಳನ್ನು ಅವರ ಮನೆಗೆ ವಾಪಸ್ ಕೊಡಲು‌ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲರ ಸಲಹೆಗಳನ್ನು ಪರಿಗಣಿಸಿ ಈ ಮೂರು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ರೊಟ್ಟಿ-ಬಟ್ಟೆ ಕೊಟ್ಟಿದ್ದಾರೆ : ಮುರಗೇಶ ನಿರಾಣಿ ಅವರಿಗೆ ಸೇರಿದ ಫೇಸ್​ಬುಕ್​ ಪೇಜ್​ನಲ್ಲಿ ಶ್ರೀಪೀಠಕ್ಕೆ ರೊಟ್ಟಿ, ಬಟ್ಟೆ, ಕಸಬರಗಿ ಕೊಟ್ಟಿರುವುದಾಗಿ ಪೋಸ್ಟ್ ಮಾಡಲಾಗುತ್ತಿದೆ. ಅದನ್ನು ಮರಳಿಸಲು ನಿರ್ಧರಿಸಿದ್ದೇನೆ. ಶ್ರೀಪೀಠಕ್ಕೆ‌ ಎಲ್ಲರೂ ದಾನ-ಧರ್ಮ ಕೊಟ್ಟಿದ್ದಾರೆ. ಆದರೆ, ನಿರಾಣಿ ಹೆಸರಲ್ಲಿರುವ ಪೋಸ್ಟ್‌ಗಳಲ್ಲಿ ಸ್ವಾಮೀಜಿ ನಮ್ಮ ಋಣದಲ್ಲಿದ್ದಾರೆ ಅಂತಾ ಪದೇಪದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದು ನಮ್ಮ ಪಂಚಮಸಾಲಿ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮಠದ ಭಕ್ತರ ಮನಸ್ಸಿಗೂ ತುಂಬಾ ನೋವುಂಟು ತರಿಸಿದೆ. ಹೀಗಾಗಿ, ಸಮಾಜ ಬಾಂಧವರಿಂದ ದಾಸೋಹ ಸಂಗ್ರಹ ಮಾಡಿ ಸಚಿವ ನಿರಾಣಿ ಮಠಕ್ಕೆ ನೀಡಿದ ವಸ್ತುಗಳನ್ನು ಅವರಿಗೆ ವಾಪಸ್ ಕೊಡುತ್ತೇವೆ. ನಾನು ಭಕ್ತರ ಋಣದಲ್ಲಿರಲು ಇಷ್ಟ ಪಡುತ್ತೇನೆಯೇ ಹೊರತು, ವ್ಯಕ್ತಿಯ ಋಣದಲ್ಲಿ ಇರಲ್ಲ.

ಹದಿನಾಲ್ಕು ವರ್ಷ ನನ್ನ ಸಾಕಿ ಬೆಳೆಸಿದ್ದು ಭಕ್ತರು, ಯಾವ ವ್ಯಕ್ತಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಬರುತ್ತಿದ್ದರೂ ಸಚಿವ ಮುರಗೇಶ್ ನಿರಾಣಿ ಮೌನವಹಿಸಿದ್ದಾರೆ ಎಂದರೆ ಏನರ್ಥ?. ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೆ ಫೋಸ್ಟ್ ಮಾಡಿದರೆ ನಮಗೆ ನೋವಾಗುತ್ತದೆ. ಮಠಕ್ಕೆ ಏನೇನು‌ ಕೊಟ್ಟಿದ್ದಾರೆ ಎಂದು ಸಚಿವರು ಪಟ್ಟಿ ನೀಡಲಿ. ಅವುಗಳನ್ನು ನಾನು ಮರಳಿಸುತ್ತೇನೆ ಎಂದು ಹೇಳಿದರು.

ಮೀಸಲಾತಿ ಸಿಗುವ ಭರವಸೆ ಇದೆ : ಬಸವರಾಜ್ ಬೊಮ್ಮಾಯಿ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಬಜೆಟ್ ಅಧಿವೇಶನ ಮುನ್ನವೇ ಮೀಸಲಾತಿ ಪ್ರಕಟಿಸುತ್ತಾರೆ ಎಂಬ ಆಶಾಭಾವನೆ ಇದೆ. ಅಷ್ಟರೊಳಗೆ ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ. ಮೀಸಲಾತಿ ನೀಡುವ ಸಂಬಂಧ ಸರ್ಕಾರ ಈಗಾಗಲೇ ಸಮೀಕ್ಷೆ ಆರಂಭಿಸಿದೆ. ಮೀಸಲಾತಿ ಸಿಗದಿದ್ದರೆ ಮತ್ತೆ ಹೋರಾಟ ಮುಂದುವರೆಯಲಿದೆ. ಹೋರಾಟದ ರೂಪರೇಷೆ ನಂತರವೇ ಪ್ರಕಟಿಸುತ್ತೇವೆ ಎಂದರು.

ಓದಿ: ಸಮಾನತೆಯ ಪ್ರತಿಮೆ ಬಳಿ ಧಾರ್ಮಿಕ ಕಾರ್ಯಕ್ರಮಗಳು ಆರಂಭ.. ಇಲ್ಲಿದೆ ರಾಮಾನುಜರ ಕುರಿತ ಮಾಹಿತಿ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.