ETV Bharat / state

ಬೆಳಗಾವಿಯಲ್ಲಿ ಕಂತೆ ಕಂತೆ ನಕಲಿ ನೋಟು ಚಲಾವಣೆಗೆ ಯತ್ನ: ಮೂವರು ಆರೋಪಿಗಳ ಬಂಧನ

ಬಾರ್​ನಲ್ಲಿ ಕ್ಯಾಷಿಯರ್​ಗೆ ನಕಲಿ ನೋಟುಗಳನ್ನು ಕೊಡಲು ಮುಂದಾಗಿದ್ದ, ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.

ಮೂವರು ಆರೋಪಿಗಳ ಬಂಧನ
ಮೂವರು ಆರೋಪಿಗಳ ಬಂಧನ
author img

By

Published : Aug 31, 2022, 5:47 PM IST

ಬೆಳಗಾವಿ: 500 ರೂಪಾಯಿ ಮುಖ ಬೆಲೆಯ ನಕಲಿ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ, ಗೋಕಾಕ್ ತಾಲೂಕಿನ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಘಟಪ್ರಭಾದ ಪಟ್ಟಣದ ಬಾರ್​ನಲ್ಲಿ ಕ್ಯಾಷಿಯರ್​ಗೆ ನಕಲಿ ನೋಟುಗಳನ್ನು ಕೊಡಲು ಆರೋಪಿಗಳು ಮುಂದಾಗಿದ್ದರು. 500 ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಅಂತಾ ಇದ್ದು, ಇದಲ್ಲದೇ ಫುಲ್ ಆಫ್ ಫನ್ ಅಂತಾ ಇತ್ತು. ಹಾಗಾಗಿ ಅನುಮಾನ ಬಂದ ಹಿನ್ನೆಲೆ ಪೊಲೀಸರಿಗೆ ಬಾರ್ ಮಾಲೀಕರು ದೂರು ನೀಡಿದ್ದರು.

ನಕಲಿ ನೋಟು ಚಲಾವಣೆಗೆ ಯತ್ನ

ಪ್ರಕರಣ ದಾಖಲಿಸಿಕೊಂಡ ಘಟಪ್ರಭಾ ಪೊಲೀಸರು ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ, ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 473 ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್.ಪಿ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಮುಂದಿನ ತನಿಖೆಯನ್ನು ಘಟಪ್ರಭಾ ಪೊಲೀಸರು ಕೈಗೊಂಡಿದ್ದಾರೆ.

ಇದನ್ನೂ ಓದಿ: ಡೆಪಾಸಿಟ್ ಸೋಗಿನಲ್ಲಿ‌ ನಕಲಿ ನೋಟು ವರ್ಗಾವಣೆ ಯತ್ನ: 10 ಸಾವಿರ ಫೇಕ್ ನೋಟು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.