ಅಥಣಿ (ಬೆಳಗಾವಿ): ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಸವಾರನ ಕಣ್ಣಿನೊಳಗೆ ಕಬ್ಬು ಸೇರಿರುವ ಘಟನೆ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ನಡೆದಿದೆ.
ಅಜಿತ್ ಸಕಲ್ಕನವರ್ ಎಂಬ ಯುವಕನ ಕಣ್ಣಿಗೆ ಕಬ್ಬು ಸೇರಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸೇರಿಸಿ, ಕಣ್ಣಿನೊಳಗೆ ಹೊಕ್ಕಿದ್ದ ಮೂರು ಇಂಚಿನ ಕಬ್ಬನ್ನು ವೈದ್ಯರು ಹೊರ ತೆಗೆದಿದ್ದಾರೆ.
ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬಿನ ಹಂಗಾಮು ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ.