ETV Bharat / state

ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಯಂತಿ ಪ್ರಯುಕ್ತ ಅಡ್ಡ ಪಲ್ಲಕ್ಕಿ ಉತ್ಸವ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳ 185ನೇ ಜಯಂತಿ ಪ್ರಯುಕ್ತ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು.

ಶಿವಯೋಗಿಗಳ 185ನೇ ಜಯಂತಿ ಪ್ರಯುಕ್ತ ಅಡ್ಡಪಲ್ಲಕ್ಕಿ ಉತ್ಸವ

author img

By

Published : Jun 22, 2020, 9:53 PM IST

ಅಥಣಿ (ಬೆಳಗಾವಿ): ಶ್ರೀ ಮುರುಘೇಂದ್ರ ಶಿವಯೋಗಿಗಳ 185ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಶ್ರೀ ಶಿವಬಸವ ಮಹಾಸ್ವಾಮಿಗಳು ಚಾಲನೆ ನೀಡಿದ್ರು.

ಬಳಿಕ ಮಾತನಾಡಿದ ಅವರು, ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವದಾದ್ಯಂತ ತೊಲಗಲಿ. ಎಲ್ಲಾ ಜನರು ಮತ್ತೆ ನಿರಾಳವಾಗಿ ಅಡಚಣೆಯಿಲ್ಲದೆ ಜೀವಿಸುವಂತಾಗುವಂತೆ ಅಪ್ಪ ಮುರುಘೇಂದ್ರ ಶಿವಯೋಗಿಗಳನ್ನು ಪ್ರಾರ್ಥಿಸೋಣ ಎಂದರು. 1917ರಲ್ಲಿ ಅಥಣಿ ಗಚ್ಚಿನ ಮಠಕ್ಕೆ ಆಗಮಿಸಿದ್ದ ಲೋಕಮಾನ್ಯ ತಿಲಕರು ಅಥಣಿ ಶಿವಯೋಗಿಗಳ ದಿವ್ಯ ಚೇತನ ಕಂಡು "ಲೈಟ್ ಆಫ್ ದಿ ಲ್ಯಾಂಡ್" ಎಂದು ಕರೆದರು.

ಅಥಣಿಯ ಮಠದ ಕಟ್ಟಡ ಗಚ್ಚಿನದು. ಅದಕ್ಕಾಗಿ ಅದಕ್ಕೆ "ಗಚ್ಚಿನಮಠ" ಎಂದು ಕರೆಯುತ್ತಾರೆ. ಇದು ಇಂದಿಗೂ ಆ ಮಹಾನ್​ ದಿವ್ಯ ತೆಜಸ್ಸನ್ನು ಬೀರುತ್ತಿದೆ. ಅದಕ್ಕಾಗಿ ಈ ಮಠಕ್ಕೆ ಧಾರವಾಡದ ಮ್ರುತ್ಯುಂಜಯ ಅಪ್ಪಗಳು ಅಥಣಿ ಎಂದರೆ ಭುವನ ಕೈಲಾಸ ಎಂದಿದ್ದಾರೆ ಎಂದು ಶ್ರೀ ಶಿವಬಸವ ಮಹಾಸ್ವಾಮಿಗಳು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.