ಅಥಣಿ: ತಾಲೂಕಿನ ಜನವಾಡ ಗ್ರಾಮದ ನಿವಾಸಿಯಾದ ರಾಮು ಸದಾಶಿವ ಕಾಂಬಳೆ ಎಂಬ ಪೊಲೀಸ್ ಕಾನ್ಸ್ಟೆಬಲ್ ಜನವಾಡ ಗ್ರಾಮದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮುಡಿಸುವುದರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ತಾಲೂಕಿನ ಜನವಾಡ ಗ್ರಾಮದ ನಿವಾಸಿಯಾದ ರಾಮು ಸದಾಶಿವ ಕಾಂಬಳೆ-ದೀಪಾ ಕಾಂಬಳೆ ಈ ಜಾಗೃತಿ ಮೂಡಿಸಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ ಸುರಕ್ಷಿತವಾಗಿರಿ, ಜೀವನ ಅಮೂಲ್ಯವಾದದ್ದು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಮರ್ಪಕವಾಗಿ ಬಳಸಿ ಎಂಬ ಘೋಷಣೆ ಬರೆದ ಪೋಸ್ಟರ್ ಹಿಡಿದುಕೊಂಡಿದ್ದು ವಿಶೇಷ.
ಬೆಂಗಳೂರಿನ ಬೆಳಂದೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಮು ಕಾಂಬಳೆ ಕೊರೊನಾ ಬಂದ ಸಂದರ್ಭದಲ್ಲಿ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಅವಿರತವಾಗಿ ಸೇವೆಯನ್ನು ಸಲ್ಲಿಸಿದ್ದರು. ಮೊದಲೇ ನಿಶ್ಚಯವಾದ ದಿನಾಂಕದಂದು ಮದುವೆ ಮಾಡಿಕೊಂಡಿದ್ದು, ಮದುವೆಯ ಎಲ್ಲಾ ಕಾರ್ಯದಲ್ಲಿಯೂ ಕೂಡ ಎಲ್ಲರಿಗೂ ಸಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹೇಳಿದ್ದಾರೆ. ಇನ್ನು ಸ್ಯಾನಿಟೈಜರ್ನ್ನು ಕೂಡ ಎಲ್ಲಾ ಕಡೆ ಬಳಸಿ ಎಂಬ ಸಲಹೆ ನೀಡಿ ಊರಿನ ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ.