ETV Bharat / state

ರಾಹುಲ್​​ ಗಾಂಧಿ ಜನ್ಮದಿನ: ಪೌರ ಕಾರ್ಮಿಕರ ಪಾದಪೂಜೆ - ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಅಥಣಿ ಬ್ಲಾಕ್ ಕಾಂಗ್ರೆಸ್​​ ಅಧ್ಯಕ್ಷ

ರಾಹುಲ್​​ ಗಾಂಧಿ ಅವರ ಜನ್ಮ ದಿನಾಚರಣೆ ಹಿನ್ನೆಲೆ ಅಥಣಿ ಬ್ಲಾಕ್ ಕಾಂಗ್ರೆಸ್​​ ಅಧ್ಯಕ್ಷ ಸಿದ್ದಾರ್ಥ ಸಿಂಗೆ 50ಕ್ಕೂ ಅಧಿಕ ಹಿರಿಯ ಪೌರಕಾರ್ಮಿಕರ ಪಾದಪೂಜೆ ಮಾಡಿದರು.

athani
ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಅಥಣಿ ಬ್ಲಾಕ್ ಕಾಂಗ್ರೆಸ್​​ ಅಧ್ಯಕ್ಷ
author img

By

Published : Jun 19, 2021, 1:17 PM IST

ಅಥಣಿ: ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯಂತೆ ಶ್ರಮ ಜೀವಿಗಳಾದ ಪೌರಕಾರ್ಮಿಕರ ಪಾದಪೂಜೆ ಮಾಡುವುದು ನಿಜವಾದ ಪರಮಾತ್ಮನನ್ನು ಕಂಡಂತೆ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್​​ ಅಧ್ಯಕ್ಷ ಸಿದ್ದಾರ್ಥ ಸಿಂಗೆ 50ಕ್ಕೂ ಅಧಿಕ ಹಿರಿಯ ಪೌರಕಾರ್ಮಿಕರ ಪಾದಪೂಜೆ ಮಾಡಿದರು.

ಬ್ಲಾಕ್ ಕಾಂಗ್ರೆಸ್​​ ಸಮಿತಿ ವತಿಯಿಂದ ಪುರಸಭೆ ಆವರಣದಲ್ಲಿ ಆಯೋಜಿಸಲಾದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿ ಅವರ ಜನ್ಮ ದಿನಾಚರಣೆ, ಪುರಸಭೆ ಹಿರಿಯ ಕಾರ್ಮಿಕರ ಪಾದಪೂಜೆ ಹಾಗೂ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಿದ್ದಾರ್ಥ, ಪೌರಕರ್ಮಿಕರು ಕೊರೊನಾ ಸಂದಿಗ್ಧ ಸಮಯದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಇವರ ಸೇವೆಯನ್ನು ಪರಿಗಣಿಸಿ ಖಾಯಂ ನೌಕರರು ಎಂದು ಪರಿಗಣಿಸಲಿ ಎಂದರು.

ನಂತರ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡುತ್ತಾ ಕೊರೊನಾದಂತ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲ ಮನೆಯಲ್ಲಿ ಕುಳಿತಿದ್ದಾಗ ಪುರಸಭೆ ಕಾರ್ಮಿಕರು ಜೀವದ ಹಂಗು ತೊರೆದು ಕೆಲಸ ಮಾಡಿ ಸಮಾಜವನ್ನು ಸ್ವಚ್ಚವಾಗಿಟ್ಟಿದ್ದಾರೆ. ನಿಜಕ್ಕೂ ಇವರ ಕಾರ್ಯ ಶ್ಲಾಘನೀಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.