ETV Bharat / state

ಸಂಪುಟ ವಿಸ್ತರಣೆ ಸಂಬಂಧ ಅರುಣ್ ಸಿಂಗ್ ಶೀಘ್ರವೇ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ: ಸಿಎಂ ವಿಶ್ವಾಸ - Chief Minister B.S. Yeddyurappa Confidence

ಇಂದು ಕಾರ್ಯಕಾರಿಣಿ ಸಭೆ ಬಹಳ ಯಶಸ್ವಿಯಾಗಿ ನಡೆದಿದೆ. ಮುಖ್ಯವಾದ ತೀರ್ಮಾನಗಳನ್ನು ಕೈಗೊಂಡಿದ್ದೇವೆ‌. ಗೋಹತ್ಯೆ ನಿಷೇಧ ಕಾನೂನು ತರಲು ನಿರ್ಧರಿಸಿದ್ದೇವೆ. ಸಾಧ್ಯವಾದ್ರೆ ನಾಳೆ ನಡೆಯವ ಅಧಿವೇಶನದಲ್ಲಿ ಜಾರಿ ತರೋಕೆ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ‌ ಹೇಳಿದ್ದಾರೆ.

ಸಿಎಂ ವಿಶ್ವಾಸ
ಸಿಎಂ ವಿಶ್ವಾಸ
author img

By

Published : Dec 5, 2020, 9:34 PM IST

Updated : Dec 5, 2020, 9:58 PM IST

ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶೀಘ್ರವೇ ಗ್ರೀನ್​ ಸಿಗ್ನಲ್​ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಅವರೇ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಯಾವಾಗ ಎಂಬುದನ್ನು ಅವರೇ ತಿಳಿಸಲಿದ್ದಾರೆ ಎಂದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉಭಯ ಪಕ್ಷಗಳ ನಾಯಕರು

ಇಂದು ಕಾರ್ಯಕಾರಿಣಿ ಸಭೆ ಬಹಳ ಯಶಸ್ವಿಯಾಗಿ ನಡೆದಿದೆ. ಮುಖ್ಯವಾದ ತೀರ್ಮಾನಗಳನ್ನು ಕೈಗೊಂಡಿದ್ದೇವೆ‌. ಗೋಹತ್ಯೆ ನಿಷೇಧ ಕಾನೂನು ತರಲು ನಿರ್ಧರಿಸಿದ್ದೇವೆ. ಸಾಧ್ಯವಾದ್ರೆ ನಾಳೆ ನಡೆಯವ ಅಧಿವೇಶನದಲ್ಲಿ ಜಾರಿ ತರೋಕೆ ಪ್ರಯತ್ನ ಮಾಡುತ್ತೇವೆ‌ ಎಂದರು.

Arun Singh give a green signal soon to Volume expansion : CM Confidence
ಉಭಯ ಪಕ್ಷದ ನಾಯಕರ ಮುಖಾಮುಖಿ

ಒಂದೇ ವಿಮಾನದಲ್ಲಿ ಸಿದ್ದು-ಬಿಎಸ್​ವೈ ಪ್ರಯಾಣ

ಆಡಳಿತ ಹಾಗೂ ಪ್ರತಿಪಕ್ಷದ ನಾಯಕರು ಒಂದೇ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದರು. ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ಮುಗಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇತ್ತ ಎರಡು ದಿನ ಬೆಳಗಾವಿ ಪ್ರವಾಸ ಮುಗಿಸಿ ಸಿಎಂ ಬಿಎಸ್​ವೈ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಆರ್.ಅಶೋಕ ಕೂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಉಭಯ ಪಕ್ಷಗಳ ನಾಯಕರು ಮುಖಾಮುಖಿಯಾಗಿ ಮಾತನಾಡಿದರು. ಬಳಿಕ ಉಭಯ ಪಕ್ಷದ ನಾಯಕರು ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದರು.

Last Updated : Dec 5, 2020, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.