ETV Bharat / state

ಮನೆ ಮುಂದೆ ನಿಲ್ಲಿಸಿದ್ದ ವಾಹನ ಕದ್ದಿದ್ದ ಖದೀಮರು ಅಂದರ್​

ತಪಾಸಣೆ ನಡೆಸಿದ ಪೊಲೀಸರು, ಮಾಂಗೂರ ಫಾಟಾ ಹತ್ತಿರ ಇಬ್ಬರನ್ನೂ ಬಂಧಿಸಿ ಅವರಿಂದ 3 ಲಕ್ಷ ಮೌಲ್ಯದ ವಾಹನ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

author img

By

Published : Jun 17, 2019, 12:51 PM IST

ಚಿಕ್ಕೋಡಿ: ಮನೆ ಮುಂದೆ ನಿಲ್ಲಿಸಿದ್ದ ವಾಹನ ಕಳವು ಮಾಡಿಕೊಂಡು ಹೋಗಿದ್ದ ಇಬ್ಬರು ಖದೀಮರನ್ನು ಹಿಡಿಯುವಲ್ಲಿ ನಿಪ್ಪಾಣಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಕೇಶವಪುರದ ಕೊಂಚಿಕೊರವರ ಓಣಿಯ ಗಂಗಪ್ಪಾ ಯಲ್ಲಪ್ಪಾ ಮುಳಗುಂದ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದ ಮದಿನಿ ನಗರ ಪ್ಲಾಟ್‌ನ ನೂರ್‌ ಭಾಷಾ ಹುಸೇನಸಾಬ್​ ಯಾದವಾಡ ಬಂಧಿತರು.

ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದ ರಾಜಾರಾಮ ಶ್ರೀಕೃಷ್ಣಾ ನಲವಡೆ ಮನೆ ಮುಂದೆ ನಿಲ್ಲಿಸಿದ್ದ ಮಹಿಂದ್ರ ಬುಲೆರೊ ಮಾಕ್ಸಿ ಗೂಡ್ಸ್ ಜೀಪ್ ಕಳವಾಗಿದ್ದರ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಪಾಸಣೆ ನಡೆಸಿದ ಪೊಲೀಸರು, ಮಾಂಗೂರ ಫಾಟಾ ಹತ್ತಿರ ಇಬ್ಬರನ್ನೂ ಬಂಧಿಸಿ ಅವರಿಂದ 3 ಲಕ್ಷ ಮೌಲ್ಯದ ವಾಹನ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಚಿಕ್ಕೋಡಿ ಎಎಸ್‌ಪಿ ಮಿಥುನ್​ ಕುಮಾರ್​ ಜಿ.ಕೆ. ನೇತೃತ್ವದಲ್ಲಿ ಸಿಪಿಐ ಕರುಣೇಶಗೌಡ ಜೆ., ಪಿಎಸ್‌ಐ ಬಿ.ಎಸ್. ತಳವಾರ, ಎಎಸ್ಐ ಎಸ್.ಐ. ಕಮ್ಮಾರ, ಎ.ಬಿ. ಗಿಡ್ಡಾಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Intro:ಲಕ್ಷಾಂತರ ಮೌಲ್ಯದ ವಾಹನ ಹಾಗೂ ಹಣ ವಶಪಡಿಸಿಕೊಂಡ ಪೋಲಿಸರುBody:

ಚಿಕ್ಕೋಡಿ :

ಮನೆ ಮುಂದೆ ನಿಲ್ಲಿಸಿದ ವಾಹನವನ್ನು ಕಳುವು ಮಾಡಿಕೊಂಡು ಹೋಗಿದ್ದ ಇಬ್ಬರು ಖದೀಮರನ್ನು ಹಿಡಿಯುವಲ್ಲಿ ನಿಪ್ಪಾಣಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಕೇಶವಪುರದ ಕೊಂಚಿಕೊರವರ ಓಣಿಯ ಗಂಗಪ್ಪಾ ಯಲ್ಲಪ್ಪಾ ಮುಳಗುಂದ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸನ ಮದಿನಿ ನಗರ ಪ್ಲಾಟ್‌ನ ನೂರ್‌ ಭಾಷಾ ಹುಸೇನಸಾಬ ಯಾದವಾಡ ಬಂಧಿತರು.

ನಿಪ್ಪಾಣಿ ತಾಲ್ಲೂಕಿನ ಹಂಚಿನಾಳ ಗ್ರಾಮದ ರಾಜಾರಾಮ ಶ್ರೀಕೃಷ್ಣಾ ನಲವಡೆ ಮನೆ ಮುಂದೆ ನಿಲ್ಲಿಸಿದ ಮಹಿಂದ್ರ ಬುಲೆರೊ ಮಾಕ್ಸಿ ಗೂಡ್ಸ್ ಜೀಪ್ ಕಳುವಾಗಿದ್ದರ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಪಾಸಣೆ ನಡೆಸಿದ ಪೊಲೀಸರು ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ಹದ್ದಿನಲ್ಲಿ ಬರುವ ಮಾಂಗೂರ ಫಾಟಾ ಹತ್ತಿರ ಇಬ್ಬರನ್ನೂ ಬಂಧಿಸಿ ಅವರಿಂದ 2.80 ಲಕ್ಷ ಮೌಲ್ಯದ ವಾಹನ, 25 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿ ಎಎಸ್‌ಪಿ ಮಿಥುನ ಕುಮಾರ ಜಿ.ಕೆ. ನೇತೃತ್ವದಲ್ಲಿ ಸಿಪಿಐ ಕರುಣೇಶಗೌಡ ಜೆ., ಪಿಎಸ್‌ಐ ಬಿ.ಎಸ್. ತಳವಾರ, ಎಎಸ್ಐ ಎಸ್.ಐ. ಕಮ್ಮಾರ, ಎ.ಬಿ. ಗಿಡ್ಡಾಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.