ಅಥಣಿ (ಬೆಳಗಾವಿ): ತಾಲೂಕಿಗೆ ಪ್ರತ್ಯೇಕ ಸಹಾಯಕ ಪ್ರಾದೇಶಿಕ ಸಾರಿಕೆ ಅಧಿಕಾರಿ (ಆರ್ಟಿಓ) ಕಚೇರಿ ನೀಡಬೇಕೆಂಬ ಬಹುದಿನಗಳ ಬೇಡಿಕೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮೇಲಿಂದ ಮೇಲೆ ಪ್ರಸ್ತಾವನೆ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ, ಜನರ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದ್ದು, ಕೊನೆಗೂ ಸಮ್ಮತಿ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಕೃಷಿ, ವಾಣಿಜ್ಯ ಚಟುವಟಿಕೆಗಳ ತಾಲೂಕಾಗಿದೆ. ಇಲ್ಲಿ ಸಂಚಾರ ಮತ್ತು ವಹಿವಾಟು ಹೆಚ್ಚಾಗಿರುವುದರಿಂದ ಪ್ರತ್ಯೇಕ ಆರ್ಟಿಒ ಕಚೇರಿ ಸ್ಥಾಪನೆ ಮಾಡಬೇಕೆಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳು ಸಕಾರಣವಾಗಿರುವ ಹಿನ್ನಲೆಯಲ್ಲಿ ಸರ್ಕಾರ ಮಂಜೂರಾತಿ ನೀಡಿದೆ.