ETV Bharat / state

ಹಳೆ ಮೊಬೈಲ್ ತಗೋರಿ, ಹೊಸ ಮೊಬೈಲ್ ಕೊಡಿ: ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಅಂಗನವಾಡಿ ಕಾರ್ಯಕರ್ತೆಯರು ತಮ್ಮ‌ ಸಮಸ್ಯೆ ಪರಿಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
author img

By

Published : Jul 10, 2023, 9:49 PM IST

Updated : Jul 11, 2023, 11:13 AM IST

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೆಳಗಾವಿ : ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಹೊಸ ಮೊಬೈಲ್ ನೀಡುವುದು ಸೇರಿ‌ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದರು‌. ಅಂಗನವಾಡಿ ಕಾರ್ಯಕರ್ತೆಯರು ತಮ್ಮ‌ ಸಮಸ್ಯೆ ಪರಿಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಬೇಕೇ ಬೇಕು ಹೊಸ ಮೊಬೈಲ್ ಬೇಕು ಎಂದು ಘೋಷಣೆ ಕೂಗಿದರು.

2023 ರ ಬಜೆಟ್‌ನಲ್ಲಿ ಹೆಚ್ಚಳವಾದ 1 ಸಾವಿರ ರೂ. ಗೌರವಧನ ಬಿಡುಗಡೆ, ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ, ಜಾರಿಗೊಳಿಸಬೇಕು. ಸಾಮಾಜಿಕ ಭದ್ರತೆಗಳಾದ ಇಎಸ್ಐ, ಪಿಎಫ್, ಪಿಂಚಣಿ, ಎಕ್ಸ್‌ಗ್ರೇಷಿಯಾ ಇತರ ಸೌಲಭ್ಯ, 45 ಮತ್ತು 46 ನೇ ಇಂಡಿಯನ್ ಲೇಬರ್ ಕಾನ್ಸರೆನ್ಸ್‌ಗಳ ಶಿಫಾರಸು ಜಾರಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೊಡುವ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು.

ಆ ಪ್ರಕಾರ ಮೂಲ ವೇತನ ನಿಗದಿ, ವೇತನ ಹೆಚ್ಚಳ ನಿಗದಿ, ಇತರ ಭತ್ಯೆಗಳ ಪರಿಶೀಲನೆ ಮತ್ತು ನಿಗದಿಗಾಗಿ ಸಮಿತಿಯೊಂದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರಚಿಸುವುದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ಸಂಧ್ಯಾ ಕುಲಕರ್ಣಿ, ’’ಅಂಗನವಾಡಿ ಕಾರ್ಯಕರ್ತರಿಗೆ ಮೊದಲು 2 ಜಿಬಿ ರ‍್ಯಾಮ್​​ ಇರುವ ಮೊಬೈಲ್​ ಕೊಟ್ಟಿದ್ದು, ಕೇವಲ ಅಂಗನವಾಡಿ ಕಾರ್ಯವನ್ನು ನಿರ್ವಹಿಸುವಂತೆ ಸೂಚಿಸಲಾಗಿತ್ತು. ಬಳಿಕ ಒಂದೊಂದಾಗಿ ಹೆಚ್ಚುವರಿ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿ ಸರ್ವೇ ಮಾಡುತ್ತಿರುವುದರಿಂದ ಈಗಿರುವ ಮೊಬೈಲ್​ ಹ್ಯಾಂಗ್​ ಆಗುತ್ತಿದೆ. ಮತ್ತೊಂದೆಡೆ ಹಳ್ಳಿ ಭಾಗಗಳಲ್ಲಿ ಸರ್ವೇ ಮಾಡಲು ಹೋದಾಗ ನೆಟ್​ವರ್ಕ್​ ಸಿಗದೇ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರ‍್ಯಾಮ್​ ಹೆಚ್ಚಿರುವ ಉತ್ತಮ ಗುಣಮಟ್ಟದ ಮೊಬೈಲ್​ ನೀಡಬೇಕು. ಇಲ್ಲದಿದ್ದರೆ ನಾವೇ ಕೆಲಸ ಮಾಡುವುದಿಲ್ಲ‘‘ ಎಂದು ಆಗ್ರಹಿಸಿದರು.

ಬಳಿಕ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ವಿ ಕುಲಕರ್ಣಿ ಮಾತನಾಡಿ, ’’ಕಳಪೆ ಗುಣಮಟ್ಟದ ಮೊಬೈಲ್ ವಾಪಸ್ ಕೊಟ್ಟು ಹೊಸ ಗುಣಮಟ್ಟದ ಮೊಬೈಲ್ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕರೆ ಮೇರೆಗೆ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಹಿಂದಿನ ಮಾಜಿ ಸಿಎಂ ಬವಸರಾಜ ಬೊಮ್ಮಾಯಿ ಸರ್ಕಾರ ಬಜೆಟ್ ನಲ್ಲಿ ಹೆಚ್ಚಿಸಿದ್ದ 1 ಸಾವಿರ ರೂ. ಗೌರವಧನ ಈವರೆಗೂ ಜಾರಿಗೆ ಬಂದಿಲ್ಲ‌. ಮೊನ್ನೆ ಬಂದ ಸರ್ಕಾರ ಈ ನಿಟ್ಟಿನಲ್ಲಿ ಸ್ಪಂದಿಸದೇ ನಿರಾಸೆ ಮೂಡಿಸಿದೆ. ಬರುವ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಂದಾ ನೇವಗಿ, ಶೋಭಾ ತಳವಾರ, ಮೀನಾಕ್ಷಿ ದಫಡೆ, ಶೈಲಜಾ ಕುಲಕರ್ಣಿ, ಗುಲಾಬಿ ಗುರ್ಜರ್, ಕೃಷ್ಣಾ ತೋಪಿನಕಟ್ಟಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ : ಇ-ಸಮೀಕ್ಷೆ ಕೆಲಸದಿಂದ ವಿನಾಯಿತಿ ನೀಡುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

Last Updated : Jul 11, 2023, 11:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.