ಚಿಕ್ಕೋಡಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ಗೆ ಇವತ್ತು ಗೋಕಾಕದ ಬಸವೇಶ್ವರ ವೃತ್ತದಲ್ಲಿ, ಕರವೇ ಕಾರ್ಯಕರ್ತರು ಹಾಗೂ ಜೈ ಹೋ ಜನತಾ ವೇದಿಕೆ ಪ್ರತಿಭಟನೆ ಮಾಡಿ ಅಮೂಲ್ಯ ಭಾವ ಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದರು.
ತುಂಬಿದ ಸಭೆಯಲ್ಲಿ ಪಾಕ್ ಪರ ಘೊಷಣೆ ಕೂಗಿದ ಅಮೂಲ್ಯಳ ನಿಜವಾದ ಮುಖವಾಡ ಬಯಲಾಗಿದೆ. ಇದು ಕೂಡ ಒಂದು ಪಾಕಿಸ್ತಾನ ನಾಯಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಇವಳ ವಿರುದ್ಧ ಪೊಲೀಸ್ ಇಲಾಖೆಯವರು ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲದೇ ಕರ್ನಾಟಕದ ಯಾವುದೇ ಹೋರಾಟದಲ್ಲಿ ಕಾಣಿಸಿಕೊಂಡರೆ ಇವರಿಗೆ ನಿರಂತರವಾಗಿ ಚಪ್ಪಲಿ ಸೇವೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.