ETV Bharat / state

ಬೆಳಗಾವಿ ದಕ್ಷಿಣದಲ್ಲಿ ಅಮಿತ್ ಶಾ ಮತಬೇಟೆ: ಅಭಯ ಪಾಟೀಲ ಪರ ಭರ್ಜರಿ ರೋಡ್ ಶೋ - Amit Shah Road Show in Belgavi South

ಈ ಬಾರಿ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರ್ಕಾರವನ್ನು ನಾವು ರಚಿಸುತ್ತೇವೆ ಎಂದು ಅಮಿತ್​ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
author img

By

Published : May 7, 2023, 3:57 PM IST

Updated : May 7, 2023, 5:04 PM IST

ಅಭ್ಯರ್ಥಿ ಅಭಯ ಪಾಟೀಲ್ ಪರ ಅಮಿತ್ ಶಾ ರೋಡ್ ಶೋ

ಬೆಳಗಾವಿ : ಇಡೀ ಉತ್ತರ ಕರ್ನಾಟಕ ಮತ್ತು ಬೆಳಗಾವಿ ಅಭಿವೃದ್ಧಿಗೋಸ್ಕರ ಪ್ರಚಂಡ ಬಹುಮತದಿಂದ‌ ಬಿಜೆಪಿ‌ಯನ್ನು ಗೆಲ್ಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನವಿ ಮಾಡಿದರು. ಇಂದು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಅಭಯ ಪಾಟೀಲ್ ಪರ ಭರ್ಜರಿ ರೋಡ್ ಶೋ ವೇಳೆ ಅವರು ಮಾತನಾಡಿದರು.

ಇಲ್ಲಿ ಆಗಮಿಸಿರುವ ಎಲ್ಲರಿಗೂ ನಮ್ಮ ಪಕ್ಷದಿಂದ ಧನ್ಯವಾದ ತಿಳಿಸುತ್ತೇನೆ.‌ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಭಯ ಪಾಟೀಲರಿಗೆ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಬೇಕು.‌ ಈ ಬಾರಿ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರ್ಕಾರವನ್ನು ನಾವು ರಚಿಸುತ್ತೇವೆ. ಹೀಗಾಗಿ ಅಭಯ ಪಾಟೀಲ ಬೆಂಬಲಿಸುವಂತೆ ಮನವಿ ಮಾಡಿದ ಅಮಿತ್ ಶಾ, ಪ್ರಧಾನಿ ಮೋದಿ ನೇತೃತ್ವದಲ್ಲಿ ಇಡೀ ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಶಾ ಭರವಸೆ ನೀಡಿದರು.

ಅಮಿತ್ ಶಾ ಭಾಷಣ‌ ವಿಡಿಯೋ‌ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮಗಳಿಗೆ ಸಿ.ಆರ್.ಪಿ.ಎಫ್ ಸಿಬ್ಬಂದಿ ಅಡ್ಡಿಪಡಿಸಲು ಯತ್ನಿಸಿದರು. ಇದರಿಂದ‌ ಕೆರಳಿದ ಶಾ ಸಿ.ಆರ್.ಪಿ.ಎಫ್. ಸಿಬ್ಬಂದಿಗಳಿಗೆ ಅಲ್ಲಿಂದ ತೆರಳುವಂತೆ ಖಡಕ್ ಸೂಚನೆ ನೀಡಿದರು. ಬಳಿಕ‌ ಮಾತು ಮುಂದುವರಿಸಿದ ಅವರು, ಬಿಜೆಪಿ ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಡು ಇಡೀ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಮಾಡುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸಮಾಜ ಮತ್ತು ಧರ್ಮಗಳ ಮಧ್ಯೆ ಜಗಳ ಹಚ್ಚಿ ತಮ್ಮ‌ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ದಕ್ಷಿಣ ಕ್ಷೇತ್ರದ ಎಲ್ಲ ಮತದಾರರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಅಭಯ ಪಾಟೀಲ ಅವರಿಗೆ ಮತ ಹಾಕಿ‌ ಮತ್ತೊಂದು ಬಾರಿ ಗೆಲ್ಲಿಸುವಂತೆ ಕೋರಿದರು.

ಪ್ರಧಾನಿ‌ ಮೋದಿಯವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದ್ದು, ಸಮೃದ್ಧವಾಗಿ ದೇಶದ ಗೌರವ ಹೆಚ್ಚಾಗಿದೆ. ಹೀಗಾಗಿ ಮತ್ತೆ ಡಬಲ್ ಎಂಜಿನ್ ಸರ್ಕಾರ ರಚನೆಗೆ ಆಶೀರ್ವಾದ ಮಾಡಬೇಕು. ಮೇ 10ನೇ ತಾರೀಖು ನಡೆಯುವ ಚುನಾವಣೆಯಲ್ಲಿ ಭಾರಿ ಸಂಖ್ಯೆಯಲ್ಲಿ‌ ಮತದಾರರು ಕಮಲದ ಗುರುತಿಗೆ ಮತ ನೀಡಿ ಅಭಯ ಪಾಟೀಲ ಗೆಲ್ಲಿಸುವಂತೆ ಕೇಳಿಕೊಂಡರು. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಕೂಗುವ ಮೂಲಕ ಅಮಿತ್ ಶಾ ತಮ್ಮ ಭಾಷಣ ಮುಗಿಸಿದರು.

ವಡಗಾವಿಯ ಅರಳೆಮರ ಕಟ್ಟೆಯಿಂದ ಆರಂಭವಾದ ರೋಡ್ ಶೋ ವಡಗಾವಿ ಮುಖ್ಯ ರಸ್ತೆ, ನಾಥಪೈ ಸರ್ಕಲ್, ಶಾಹಪುರ ಖಡೇ ಬಜಾರ್ ಮಾರ್ಗವಾಗಿ ಆಗಮಿಸಿ ಶಿವಚರಿತ್ರೆಯಲ್ಲಿ ಅಂತ್ಯವಾಯಿತು.‌ ಮೆರವಣಿಗೆಯುದ್ದಕ್ಕೂ‌ ಪ್ರಧಾನಿ ಮೋದಿ, ಬಿಜೆಪಿ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಪರ ಕಾರ್ಯಕರ್ತರು ಘೋಷಣೆ ಕೂಗಿದರು. ಈ ವೇಳೆ ಗೋವಾ ಸಿಎಂ ಪ್ರಮೋದ ಸಾವಂತ್, ಅಭ್ಯರ್ಥಿ ಅಭಯ ಪಾಟೀಲ ಸೇರಿ ಮತ್ತಿತರರು ಇದ್ದರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಈ ವೇಳೆ ಬೈಕ್ ರ‍್ಯಾಲಿ ನಡೆಸಿದರು.

ಇದನ್ನೂ ಓದಿ : 'ಯಾರು ಹೊಣೆ ಮೋದಿಯವರೇ?': ಪ್ರಧಾನಿಗೆ ಕೆಲವು ಪ್ರಶ್ನೆ ಕೇಳಿದ ಸಿದ್ದರಾಮಯ್ಯ

Last Updated : May 7, 2023, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.