ಚಿಕ್ಕೋಡಿ : ಮಳೆ ಪ್ರಮಾಣದಲ್ಲಿ ಹಾಗೂ-ಹೀಗೂ ಇದ್ದುದರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಸ್ವಲ್ಪ ಕಡಿಮೆಯಾಗಿದೆ. 41,000 ಅಧಿಕ ಕ್ಯೂಸೆಕ್ಗಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ ಎಂದು ತಹಶೀಲ್ದಾರ್ ಸುಭಾಷ್ ಸಂಪಗಾಂವಿ ಮಾಹಿತಿ ನೀಡಿದ್ದಾರೆ.
ಈಟಿವಿ ಭಾರತದ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ನಿಂದ 36,250 ಕ್ಯೂಸೆಕ್, ದೂಧಗಂಗಾ ನದಿಯಿಂದ 5,632 ಕ್ಯೂಸೆಕ್ ಹೀಗೆ ಒಟ್ಟು 41,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಮಹಾರಾಷ್ಟ್ರದ ಕೊಯ್ನಾ-1ಮಿ.ಮೀ, ನವಜಾ-1 ಮಿ.ಮೀ, ಮಹಾಬಲೇಶ್ವರ-21 ಮಿ.ಮೀ, ವಾರಣಾ- 00 ಮಿ.ಮೀ, ಕಾಳಮ್ಮವಾಡಿ-58 ಮಿ.ಮೀ, ರಾಧಾನಗರಿ-40 ಮಿ.ಮೀ, ಪಾಟಗಾಂವ್ನಲ್ಲಿ-3 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 98%, ವಾರಣಾ ಜಲಾಶಯ 98%, ರಾಧಾನಗರಿ ಜಲಾಶಯ 96%, ಕಣೇರ ಜಲಾಶಯ 99%, ಧೂಮ ಜಲಾಶಯ 98%, ಪಾಟಗಾಂವ್ 99% ಧೂದಗಂಗಾ 100%, ತುಂಬಿದೆ. ಹಿಪ್ಪರಗಿ ಬ್ಯಾರೇಜ್ನಿಂದ 35,000 ಹಾಗೂ ಆಲಮಟ್ಟಿ ಜಲಾಶಯದಿಂದ 62,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ ಎಂದರು.