ಬೆಳಗಾವಿ: ಇನ್ಸಾಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆಗೆ ಶರಣಾದ ಘಟನೆ ಸಾಂಬ್ರಾದ ಏರ್‌ಫೋರ್ಸ್ ಟ್ರೈನಿಂಗ್ ಸ್ಕೂಲ್ ಗಾರ್ಡ್ ರೂಮ್‌ನಲ್ಲಿ ನಡೆದಿದೆ.
ಹರಿಯಾಣ ಮೂಲದ ಅಮೀರ್ ಖಾನ್ (24) ಆತ್ಮಹತ್ಯೆಗೆ ಶರಣಾದ ಯೋಧ. ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ಟ್ರೈನಿಂಗ್ ಸ್ಕೂಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೀರ್ ಖಾನ್ ಇನ್ಸಾಸ್ ರೈಫಲ್‌ನಿಂದ ತಾವೇ ಶೂಟ್ ಮಾಡಿಕೊಂಡಿದ್ದಾರೆ.
ಇನ್ನು ಗುಂಡಿನ ಸದ್ದು ಕೇಳಿ ಸಹೋದ್ಯಗಿಗಳು ಯೋಧನ ರೂಂಗೆ ದೌಡಾಯಿಸಿ ಕೂಡಲೇ ಆತನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದ್ರೆ ಮಾರ್ಗ ಮಧ್ಯೆ ಯೋಧ ಮೃತಪಟ್ಟಿದ್ದಾರೆ. ಯೋಧನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.