ETV Bharat / state

ಎಂಇಎಸ್ ಮಾಡುತ್ತಿರುವ ಪುಂಡಾಟಿಕೆಗೆ ಅವರನ್ನು ಹೆಡೆಮುರಿ ಕಟ್ಟಬೇಕು : ಬಿ ಸಿ ಪಾಟೀಲ್

ಶಿವಾಜಿ ಮಹಾರಾಜರು ಹಾಗೂ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರರು ಹಾಗೂ ಶೂರರು. ನಾಡಿಗಾಗಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು..

Action must be taken against MES: BC Patil
ಬಿಸಿ ಪಾಟೀಲ್
author img

By

Published : Dec 20, 2021, 1:09 PM IST

ಬೆಳಗಾವಿ : ಎಂಇಎಸ್ ಮಾಡುತ್ತಿರುವ ಪುಂಡಾಟಿಕೆಗೆ ಅವರನ್ನು ಹೆಡೆಮುರಿ ಕಟ್ಟಬೇಕು ಎಂದು ಸಚಿವ ಬಿಸಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ವಿಚಾರ ಮಾತನಾಡಿದ ಅವರು, ಹೆಡೆಮುರಿ ಕಟ್ಟದಿದ್ದರೆ ಬೆಳಗಾವಿಗರು, ಬೆಳಗಾವಿಯ ಕನ್ನಡಿಗರು ಬದುಕೋದು ಕಷ್ಟ ಆಗುತ್ತೆ. ಅವರ ಮೇಲೆ ಬಹಳ ಉಗ್ರವಾದ ಹಾಗೂ ಶೀಘ್ರವಾದ ಕ್ರಮಕೈಗೊಳ್ಳಬೇಕು.

ಶಿವಾಜಿ ಮಹಾರಾಜರು ಹಾಗೂ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರರು ಹಾಗೂ ಶೂರರು. ನಾಡಿಗಾಗಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ನಾಳೆ ಇಡೀ ದಿನ ಪರಿಷತ್‌ ಕಲಾಪದಲ್ಲಿ ಅವಕಾಶ

ಅಂತವರಿಗೆ ಅಪಮರ್ಯಾದೆ ಮಾಡುವುದು ಸರಿಯಲ್ಲ. ಏಕೀಕರಣ ಮಹಾರಾಷ್ಟ್ರದಲ್ಲಿ ಮಾಡಿಕೊಳ್ಳಲಿ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ ಜೊತೆ ಸೇರಿಕೊಂಡು ಸರ್ಕಾರ ಮಾಡಿಕೊಂಡಿವೆ. ಎಂಇಎಸ್ ಪುಂಡಾಟಿಕೆಯನ್ನು ಮೊದಲು ಕಾಂಗ್ರೆಸ್ ಖಂಡಿಸಲಿ. ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.