ETV Bharat / state

ಯುವತಿಯರ ಡೀಪ್​ ಫೇಕ್ ಫೋಟೋ ಪ್ರಕರಣ: ಆರೋಪಿ ಬಂಧನ, ಬೆಳಗಾವಿ ಎಸ್ಪಿ ಹೇಳಿದ್ದೇನು..? - ಬೆಳಗಾವಿಯಲ್ಲಿ ಯುವತಿಯರ ಡೀಪ್​ ಫೇಕ್ ಫೋಟೋ ಪ್ರಕರಣ

Deep fake case: ಬೆಳಗಾವಿಯಲ್ಲಿ ಯುವತಿಯರ ಡೀಪ್​ ಫೇಕ್​ ಫೋಟೊ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.

accused-arrested-belagavi-deepfake-case
ಬೆಳಗಾವಿಯಲ್ಲಿ ಯುವತಿಯರ ಡೀಪ್​ ಫೇಕ್ ಫೋಟೋ ಪ್ರಕರಣ : ಆರೋಪಿ ಬಂಧನ: ಎಸ್ಪಿ ಹೇಳಿದ್ದೇನು..?
author img

By ETV Bharat Karnataka Team

Published : Nov 12, 2023, 10:12 AM IST

ಯುವತಿಯರ ಡೀಪ್​ ಫೇಕ್ ಫೋಟೋ ಪ್ರಕರಣ: ಎಸ್​ಪಿ ಪ್ರತಿಕ್ರಿಯೆ

ಬೆಳಗಾವಿ: ದೇಶಾದ್ಯಂತ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ ಫೇಕ್ ವಿಡಿಯೋ ಸದ್ದು ಮಾಡುತ್ತಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಡೀಪ್ ಫೇಕ್ ಫೋಟೋ ಎಡಿಟ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತೆಯರ ನಗ್ನ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಖಾನಾಪುರದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಇದರಿಂದಾಗಿ ನಿನ್ನ ಮತ್ತು ಸ್ನೇಹಿತೆಯರ ಮಾನ ಹರಾಜು ಹಾಕುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದನಂತೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಡೀಪ್​ ಫೇಕ್ ಫೋಟೋ ಎಡಿಟ್ ಮಾಡಿ ತಾನು ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಮತ್ತಿಬ್ಬರು ಹುಡುಗಿಯರ ನಗ್ನ ಫೋಟೋವನ್ನು ಅಪ್ ಲೋಡ್ ಮಾಡಿದ್ದ. ಆರೋಪಿ ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡಿಕೊಂಡಿದ್ದಾನೆ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಎಚ್ಚೆತ್ತ ಖಾನಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎಸ್ಪಿ ಪ್ರತಿಕ್ರಿಯೆ : ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್​, ಸಂತ್ರಸ್ತ ಯುವತಿಯ ಸಾಮಾಜಿಕ ಜಾಲತಾಣ ಖಾತೆಯಿಂದ ಆರೋಪಿ ಫೋಟೋ ತೆಗೆದುಕೊಂಡು ಈ ರೀತಿ ಡೀಫ್ ಫೇಕ್ ಫೋಟೋ ತಂತ್ರಜ್ಞಾನದಿಂದ ನಗ್ನ ಫೋಟೋ ಎಡಿಟ್ ಮಾಡಿದ್ದ. ಬಳಿಕ ಈ ನಗ್ನ ಫೋಟೋವನ್ನು ಸಂತ್ರಸ್ತ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ಬಗ್ಗೆ ಯುವತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರಿಂದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ. ಸೈಬರ್ ಕ್ರೈಮ್​​ನಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿಸಿದರು.

ರಶ್ಮಿಕಾ ಮಂದಣ್ಣ ಅವರ ಡೀಫ್ ಫೇಕ್ ವಿಡಿಯೋ ಮಾಡಿದ್ದ ಸಾಫ್ಟವೇರ್ ಬಳಸಿಯೂ ಈ ರೀತಿ ನಗ್ನ ಫೋಟೋ ಎಡಿಟ್ ಮಾಡಿರಬಹುದು. ಇಲ್ಲವೇ ನಾರ್ಮಲ್ ಎಡಿಟಿಂಗ್ ನಲ್ಲೂ ಮಾಡಿರಬಹುದು. ಈ ರೀತಿ ಯಾರಿಗಾದ್ರೂ ಅನ್ಯಾಯ ಆಗಿದ್ದರೆ ಹಿಂಜರಿಯದೇ ನಮ್ಮ ಪೊಲೀಸರ ಬಳಿ ಬಂದು ದೂರು ಕೊಡಿ. ನಾವು ಅರೋಪಿಗಳ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ.ಭೀಮಾಶಂಕರ ಗುಳೇದ ಹೇಳಿದರು.

ಯುವತಿ ಧೈರ್ಯಕ್ಕೆ ಎಸ್ಪಿ ಮೆಚ್ಚುಗೆ : ಈ ರೀತಿ ಪ್ರಕರಣಗಳು ಸಂಭವಿಸಿದಾಗ ಅದೆಷ್ಟೋ ಯುವತಿಯರು ಆತ್ಮಹತ್ಯೆ ದಾರಿ ತುಳಿಯುತ್ತಾರೆ. ಇಲ್ಲವೇ ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ಯುವತಿ ತನಗಾದ ಅನ್ಯಾಯಕ್ಕೆ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಹಾಗಾಗಿ, ಪ್ರಕರಣ ಬೆಳಕಿಗೆ ಬಂದು ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ. ಯುವತಿ ಧೈರ್ಯಕ್ಕೆ ಡಾ.ಭೀಮಾಶಂಕರ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿ ಯಾರಾದ್ರೂ ಅನ್ಯಾಯಕ್ಕೆ ಒಳಗಾದ್ರೆ ದೂರು ನೀಡುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ : ಡೀಪ್​​ಫೇಕ್ ಕಂಟೆಂಟ್​ ವಿರುದ್ಧ ಕ್ರಮ: ​ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ರಶ್ಮಿಕಾ ಮಂದಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.