ಚಿಕ್ಕೋಡಿ : ಬೆಳಗಾವಿ ಜಿಲ್ಲೆ ಚಿಂಚಲಿ ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಒಂದು ಸಾವಿರ ಬಡ ಕುಟುಂಬಗಳಿಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ರಾಜ್ಯಾದ್ಯಕ್ಷ ಅಬ್ಬಾಸ ಮುಲ್ಲಾ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.
ಪಟ್ಟಣದ ಕೂಲಿ ಕಾರ್ಮಿಕರು, ಶಿಕ್ಕಲಗಾರ, ಅಲೆಮಾರಿ, ಬಹುರೂಪಿ ಸಮುದಾಯ ಹಾಗೂ ಬಡ ಕುಟುಂಬಗಳಿಗೆ ಅಬ್ಬಾಸ ಮುಲ್ಲಾ ಅವರು 5 ಕೆಜಿ ಗೋದಿ ಹಿಟ್ಟು, ಸಕ್ಕರೆ, ಬೇಳೆ, ಎಣ್ಣೆ, ರವೆ ಸೇರಿ ಇತರೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.
ಅಲ್ಲದೆ ಪೌರ ಕಾರ್ಮಿಕರಿಗೆ, ಪಟ್ಟಣ ಪಂಚಾಯತ್‌ನ ಎಲ್ಲ ಸಿಬ್ಬಂದಿಯನ್ನ ಸನ್ಮಾನಿಸಿದರು. ಕಳೆದ ಹದಿನೈದು ದಿನಗಳ ಹಿಂದೆ ಸುಮಾರು 2 ಸಾವಿರ ಜನರಿಗೆ ಆಹಾರ ವಿತರಿಸಿದ್ದರು. ಅಬ್ಬಾಸ ಮುಲ್ಲಾ ಅವರ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.