ETV Bharat / state

ಸಿಎ ಬಿಟ್ಟು ಕೃಷಿಗಿಳಿದ ವಿದ್ಯಾರ್ಥಿನಿ: ಮೆಣಸಿನಕಾಯಿ ಬೆಳೆದು 6 ತಿಂಗಳಲ್ಲಿ 8 ಲಕ್ಷ ಆದಾಯ - ಬಿಕಾಂ ವಿದ್ಯಾರ್ಥಿನಿ ಕೃಷಿಯಲ್ಲಿ ಸಾಧನೆ

ಬಿಕಾಂ‌ ಪದವಿ ವಿದ್ಯಾರ್ಥಿನಿಯೋರ್ವರು 30 ಗುಂಟೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು 8 ಲಕ್ಷ ಆದಾಯ ಗಳಿಸಿದ್ದಾರೆ.

ಸಿಎ ಬಿಟ್ಟು ಕೃಷಿಗಿಳಿದ ವಿಧ್ಯಾರ್ಥಿನಿ
ಸಿಎ ಬಿಟ್ಟು ಕೃಷಿಗಿಳಿದ ವಿಧ್ಯಾರ್ಥಿನಿ
author img

By

Published : May 26, 2023, 3:41 PM IST

ಕೃಷಿ ಬಗ್ಗೆ ನಿಕಿತಾ ವೈಜು ಪಾಟೀಲ ಹೇಳಿಕೆ

ಬೆಳಗಾವಿ: ಕೃಷಿ ಎಂದರೆ ಮೂಗು ಮುರಿಯುವವರ ಮಧ್ಯ ಇಲ್ಲೋಬ್ಬ ವಿದ್ಯಾವಂತ ಯುವತಿಯೋರ್ವರು 30 ಗುಂಟೆ ಜಮೀನಿನಲ್ಲಿ ಕೇವಲ ಆರು ತಿಂಗಳಲ್ಲೇ ಮೆಣಸಿನಕಾಯಿ ಬೆಳೆದು ಬರೊಬ್ಬರಿ 8 ಲಕ್ಷ ರೂ. ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ ನಿಕಿತಾ ವೈಜು ಪಾಟೀಲ (26) ಎಂಬ ಯುವತಿಯೇ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಯುವತಿ. ತಮ್ಮ 30 ಗುಂಟೆ ಜಮೀನಿನಲ್ಲಿ ನವಲ್ ಭಟಕಾ ತಳಿಯ ಮೆಣಸಿನಕಾಯಿ ಬೆಳೆದಿರುವ ನಿಕಿತಾ ಈವರೆಗೆ 2 ಲಕ್ಷ ರೂ. ಖರ್ಚು ಮಾಡಿ 8 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಈವರೆಗೆ 8 ಬಾರಿ ಮೆಣಸಿನಕಾಯಿ ಕಟಾವು ಮಾಡಲಾಗಿದ್ದು, ಪ್ರತಿ ಬಾರಿಯೂ 45 ಕ್ವಿಂಟಾಲ್​ಗಳಂತೆ ಇಳುವರಿ ಬಂದಿದೆ. ಈಗ ಮತ್ತೆ ಕಟಾವಿಗೆ ಬಂದಿದ್ದು, ಇನ್ನು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ. ನಿಕಿತಾ ಬೆಳೆದಿರುವ ಮೆಣಸಿನಕಾಯಿಗೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಡಿಮ್ಯಾಂಡ್ ಇದೆ. ಭಜ್ಜಿ, ಪಿಜ್ಜಾ, ಬರ್ಗರ್ ತಯಾರಿಸಲು ಕೂಡ ಈ ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಬೆಳಗಾವಿಯ ಭಾವುರಾವ್ ಕಾಕತಕ್ಕರ್ ಕಾಲೇಜಿನಲ್ಲಿ ಬಿಕಾಂ‌ ಪದವಿ ಪಡೆದಿರುವ ನಿಕಿತಾ, ಬಳಿಕ ಭರತೇಶ ಕಾಲೇಜಿನಲ್ಲಿ ಲೆಕ್ಕ ಪರಿಶೋಧಕ ಹುದ್ದೆಗೆ ವ್ಯಾಸಂಗ ಮಾಡುತ್ತಿದ್ದರು. ಇದೇ ವೇಳೆ, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ತಂದೆ ವೈಜು ಅಕಾಲಿಕ ನಿಧನ ನಿಕಿತಾ ಅವರನ್ನು ಚಿಂತೆಗೀಡಾಗುವಂತೆ ಮಾಡಿತು. ಇದರಿಂದ ಮುಂದೆ ಓದು ಮುಂದುವರಿಸಬೇಕಾ..? ಅಥವಾ ತಂದೆ ನಡೆಸುತ್ತಿದ್ದ ಕೃಷಿಯಲ್ಲಿ ತೊಡಗಬೇಕಾ ಎಂಬ ಪ್ರಶ್ನೆ ಎದುರಾದಾಗ ನಿಕಿತಾ ಕೃಷಿಯನ್ನೆ ಆಯ್ಕೆ ಮಾಡಿಕೊಂಡರು. ಚಿಕ್ಕಪ್ಪ ತಾನಾಜಿ, ಸಹೋದರ ಅಭಿಷೇಕ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ನಿಕಿತಾ ವಿನೂತನ ಪ್ರಯೋಗ ಕೈಗೊಂಡಿದ್ದು, ಆಧುನಿಕ ಕೃಷಿ ಪದ್ಧತಿ, ಹನಿ‌ ನೀರಾವರಿ ಮೂಲಕ ಬೆಳೆ ಬೆಳೆಯುತ್ತಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಯುವ ಕೃಷಿ ಸಾಧಕಿ ನಿಕಿತಾ ಪಾಟೀಲ, ಕೃಷಿಯ ಬಗ್ಗೆ ಸಂಶೋಧನೆ ಮಾಡಿ ನವಲ ಭಟಕಾ ತಳಿಯ ಮೆಣಸಿನ ಬೀಜ ತಂದು ಬೆಳೆದಿದ್ದೇನೆ. ಈವರೆಗೂ ಎಂಟು ಲಕ್ಷ ಆದಾಯ ಬಂದಿದ್ದು ಆರು ಲಕ್ಷ ಲಾಭ ಬಂದಿದೆ. ಎರಡು ಲಕ್ಷ ರೂಪಾಯಿ ಖರ್ಚಾಗಿದೆ. ಕೃಷಿಯಲ್ಲಿ ಲಾಭವಿದೆ. ಕೃಷಿ ಮಾಡುವುದರಿಂದ ಉತ್ತಮ ಸ್ಥಿತಿಯಲ್ಲಿ ಬದುಕು ನಡೆಸಬಹುದು. ನಾಲ್ಕು ಎಕರೆ ಜಮೀನಿನಲ್ಲಿ ಕೋತಂಬರಿ, ಸ್ವೀಟ್ ಕಾರ್ನ್ ಸೇರಿ ವಿವಿಧ ಬೆಳೆ ಬೆಳೆಯುತ್ತೇವೆ. ಈಗ ಸಿಎ ವ್ಯಾಸಂಗ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಬೇಸಾಯದಲ್ಲಿ ತೊಡಗಿಕೊಂಡಿರುವೆ ಎಂದಿದ್ದಾರೆ.

ಇಂದು ಯುವಕರು ಹೆಚ್ಚಾಗಿ ಕೃಷಿ ಕಡೆ ಮುಖ ಮಾಡುತ್ತಿಲ್ಲ. ಭೂಮಿ ಇದ್ದವರು ಅಲ್ಲಿ, ಇಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಭೂಮಿ ತಾಯಿ ನಂಬಿದರೆ ಆಕೆ ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಶ್ರದ್ಧೆಯಿಂದ ಆಧುನಿಕ ಪದ್ಧತಿ ರೂಢಿಸಿಕೊಂಡು ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿ. ಇದು ಆರಂಭವಷ್ಟೇ ಮುಂದೆ ಕೃಷಿಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವ ಅಭಿಲಾಷೆ ಹೊಂದಿದ್ದೇನೆ. ವಿವಿಧ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುವ ಯೋಜನೆ ಹಾಕಿಕೊಂಡಿದ್ದೇನೆ ಎನ್ನುತ್ತಾರೆ ನಿಕಿತಾ ಪಾಟೀಲ.

ಒಟ್ಟಾರೆ ನಿರುದ್ಯೋಗಿ ಯುವಕರಿಗೆ ಸ್ಫೂರ್ತಿಯಾಗಿರುವ ನಿಕಿತಾ ಪಾಟೀಲ ಕೃಷಿ ಸಾಧನೆ ನಿಜಕ್ಕೂ ಶ್ಲಾಘನೀಯವೇ ಸರಿ. ಇಂತಹ ಪ್ರೇರಣಾದಾಯಿ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಯ್ತು ಹೊಸ ಜಾತಿಯ ಮರ ; ಹೆಚ್ಚಿದ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.