ಬೆಳಗಾವಿ: ಕೋವಿಡ್ ಹಿನ್ನೆಲೆ ಕಂದಾಯ ಸಚಿವ ಆರ್ ಅಶೋಕ್, ನಾನು ಮತ್ತು ಆರೋಗ್ಯ ಸಚಿವ ಸುಧಾಕರ್ ಇವತ್ತು ಹೊಸ ಗೈಡ್ಲೈನ್ಸ್ ಕುರಿತು ಸಭೆ ನಡೆಸಲಿದ್ದೇವೆ ಎಂದು ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಪಂಚದಲ್ಲಿ ಕೋವಿಡ್ ಜಾಸ್ತಿಯಾಗುತ್ತಿದೆ. ವಿಶೇಷವಾಗಿ ಚೈನಾ ಮತ್ತು ಅಮೆರಿಕ ಇಲ್ಲಿಂದ ಭಾರತಕ್ಕೆ ಕೂಡ ಪ್ರಯಾಣಿಕರು ಬಂದಿದ್ದಾರೆ. ಈಗಾಗಲೇ ಭಾರತದಲ್ಲಿಯು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ವಿಚಾರದಿಂದ ಕರ್ನಾಟಕದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಈ ದೃಷ್ಟಿಯಿಂದ ನಾನು ಹಾಗೂ ಆರೋಗ್ಯ ಸಚಿವ ಸುಧಾಕರ್ ಇವತ್ತು ಈ ಕುರಿತಾಗಿ ಮಧ್ಯಾಹ್ನ ಮೀಟಿಂಗ್ನ್ನು ಕರೆದಿದ್ದೇವೆ ಎಂದರು.
ಆ ಸಭೆಯಲ್ಲಿ ವಿಶೇಷವಾಗಿ ಕೋವಿಡ್ ಅನ್ನು ನಿಯಂತ್ರಣ ಮಾಡುವುದರ ಬಗ್ಗೆ ಯಾವ ರೀತಿಯಾಗಿ ಒತ್ತನ್ನು ಕೊಡಬೇಕು ಎಂಬುದನ್ನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಎರಡನೆಯ ಅಂಶ ಪ್ರಮುಖವಾಗಿ ನಮ್ಮ ಆಸ್ಪತ್ರೆಗಳಲ್ಲಿ ಆಕ್ಸಿಜನ್ಗಳು ಹಾಗೆ ಔಷಧ ಇವುಗಳೆಲ್ಲವುಗಳ ದಾಸ್ತಾನುಗಳನ್ನು ಶೇಖರಣೆ ಮಾಡಬೇಕು. ಯಾವುದೆ ರೀತಿಯ ಸಂದರ್ಭ ಬಂದರೂ ಕೂಡ ನಿಭಾಯಿಸಲಿಕ್ಕೆ ಶಕ್ತಿ ಇರುವಂಥ ವ್ಯವಸ್ಥೆಯನ್ನು ಮಾಡುವಂತಹದ್ದು, ಇವತ್ತಿನ ಸಭೆಯ ಮುಖ್ಯ ಉದ್ದೇಶ ಎಂದು ಹೇಳಿದರು.
ಇದನ್ನೂ ಓದಿ: ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮಕ್ಕೆ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ
ಮುಖ್ಯ ಮಂತ್ರಿಯಿಂದ ಸೂಚನೆ: ಹಾಗೆ ಹೊಸ ವರ್ಷದ ಸಂಭ್ರಮಾಚರಣೆ ಬರುತ್ತಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನ್ಯೂ ಇಯರ್ಗೆ ಸಂಬಂಧಿಸಿ ಗೈಡ್ಲೈನ್ಸ್ ಕೊಡಲು ಇದೆ. ಈ ಮೂರು ವಿಷಯಗಳ ಕುರಿತು ಚರ್ಚೆಗೆ ಇಟ್ಟಿದ್ದೇವೆ. ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು ನನಗೆ ಕರೆಯನ್ನು ಮಾಡಿದ್ದರು. ಕೋವಿಡ್ ವಿಚಾರವಾಗಿ ಏನೇನು ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಆ ಪ್ರಕಾರ ಇವತ್ತು ಸಭೆಯನ್ನು ಮಾಡುತ್ತೇವೆ ತಿಳಿಸಿದರು.
ಭಯ ಪಡುವ ಅವಶ್ಯಕತೆ ಇಲ್ಲ: ಇನ್ನು ಇವತ್ತು ನಾವು ಮಾಡುವ ಸಭೆಯಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯಾರು ಭಯ ಪಡುವ ಅಗತ್ಯವಿಲ್ಲ. ವಾಣಿಜ್ಯ-ವ್ಯಾಪಾರಕ್ಕಾಗಲಿ, ಶಿಕ್ಷಣಕ್ಕಾಗಲಿ, ಕಂಪನಿ ಇಂಡಸ್ಟ್ರೀಸ್ಗಳಿಗಾಗಲಿ ಯಾವ ರೀತಿಯ ತೊಂದರೆ ಆಗುವುದಿಲ್ಲ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಏನು ಮಂಜಾಗೃತ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ. ಯಾರು ಕೋವಿಡ್ ಕುರಿತು ಭಯ ಬೀಳುವಂತಹ ಅವಶ್ಯಕತೆ ಇಲ್ಲ. ಇವತ್ತು ಅಥವಾ ನಾಳೆಯ ಒಳಗಾಗಿ ಹೊಸ ಗೈಡ್ಲೈನ್ಸ್ನ ಸೂಚನೆ ತಿಳಿಸುತ್ತೇವೆ ಎಂದರು.
ಇದನ್ನೂ ಓದಿ: ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್: ಇಬ್ಬರು ಹೋಂ ಐಸೋಲೇಷನ್