ಬೆಳಗಾವಿ: ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ನ ಅಹಮದಾಬಾದ್ ಜಿಲ್ಲೆಯ ರಣೀಫ ಗ್ರಾಮದ ರಿತೇಶಭಾಯಿ ಪಟೇಲ (37) ಬಂಧಿತ ಆರೋಪಿ. ಈತ ಗೋವಾ ಮಾರ್ಗವಾಗಿ ರಾಜ್ಯಕ್ಕೆ ಆಗಮಿಸುತ್ತಿರುವಾಗ ಕಣಕುಂಬಿ ಅಬಕಾರಿ ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 8 ಲಕ್ಷ 50 ಸಾವಿರ ರೂ. ಮೌಲ್ಯದ ಗೋವಾ ಮದ್ಯ ಹಾಗೂ ಒಂದು ವಾಹನ ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಓದಿ: ರಾಜ್ಯದಲ್ಲಿಂದು 1,236 ಜನರಿಗೆ ಕೊರೊನಾ: 10 ಮಂದಿ ಸೋಂಕಿಗೆ ಬಲಿ
ಅಬಕಾರಿ ಜಂಟಿ ಆಯುಕ್ತ, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಮತ್ತು ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.